• 7 years ago
The Union road transport and highways minister Nitin Gadkari often quotes former American president John F. Kennedy to make a point about the importance of roads. He has written that lines on his office wall.


ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಹೋದವರಿಗೆಲ್ಲಾ ಅಲ್ಲಿನ ಗೋಡೆಗೆ ಹಾಕಿರುವ ಫಲಕವೊಂದರ ಮೇಲೆ ದೃಷ್ಠಿ ಹರಿದೇ ಹರಿಯುತ್ತದೆ. ಫಲಕದ ಮೇಲೆ ಬರೆದಿರುವುದನ್ನು ಓದಿದ ಮೇಲೆ ಗಡ್ಕರಿ ಅವರ ಕನಸು ಏನು ಎಂಬುದು ಅರ್ಥವಾಗುತ್ತದೆ. ಇಷ್ಟಕ್ಕೂ ಆ ಫಲಕದ ಮೇಲೆ ಬರೆದಿರುವುದು ಏನು? 'ಅಮೆರಿಕ ಶ್ರೀಮಂತ ರಾಷ್ಟ್ರ ಎಂಬ ಕಾರಣಕ್ಕೆ ಅದರ ರಸ್ತೆಗಳು ಚೆನ್ನಾಗಿವೆ ಎಂಬುದು ಸುಳ್ಳು, ಅಮೆರಿಕದ ರಸ್ತೆಗಳು ಚೆನ್ನಾಗಿವೆ ಹಾಗಾಗಿ ಅಮೆರಿಕ ಶ್ರೀಮಂತ ರಾಷ್ಟ್ರವಾಗಿದೆ' ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್.ಕೆನಡಿ ಅವರ ಪ್ರಖ್ಯಾತ ಮಾತೊಂದನ್ನು ದೊಡ್ಡ ಅಕ್ಷರದಲ್ಲಿ ಬರೆಸಿ ತಮ್ಮ ಕಚೇರಿಯ ಗೋಡೆಯ ಮೇಲೆ ಹಾಕಿಸಿಕೊಂಡಿದ್ದಾರೆ ಸಚಿವ ನಿತಿನ್ ಗಡ್ಕರಿ.ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ನಿತಿನ್ ಗಡ್ಕರಿ ಅವರು ಮುಖ್ಯ ಕಚೇರಿಯಲ್ಲಿ ಈ ಬೋರ್ಡ್ ಹಾಕಲಾಗಿದೆ. ಜಾನ್ ಎಫ್ ಕೆನಡಿ ಅವರ ಈ ಮೌಲಿಖ ಮಾತನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ಜಾರಿಗೆ ತರಬೇಕೆಂಬ ಉದ್ದೇಶದಿಂದಲೇ ಅದನ್ನು ತಮ್ಮ ಕಚೇರಿಯಲ್ಲಿ ದೊಡ್ಡ ಅಕ್ಷರದಲ್ಲಿ ಅಚ್ಚು ಹಾಕಿಸಿ ಹಾಕಿಸಿಕೊಂಡಿದ್ದಾರೆ.

Category

🗞
News

Recommended