• 8 years ago
ಸರ್ಕಾರಿ ನೌಕರರಿಗೆ ಹಾಗು ಶಾಲಾ ಕಾಲೇಜು ಮಕ್ಕಳು ಬಹಳ ಕಾತುರರಿಂದ ಕಾಯುತಿದ್ದ ಮುಂದಿನ ವರ್ಷದ ರಜೆ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ . 2018-19ನೇ ಸಾಲಿನ ಸರ್ಕಾರಿ ರಜೆ ಪಟ್ಟಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಎರಡನೇ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನ ಸೇರಿಸಿ ಒಟ್ಟು 87 ರಜೆಗಳು ಇರಲಿವೆ. ರಜೆಗಳು ಹಿಂದಿನ ವರ್ಷಗಳ ಹಾಗೆ ಭಾನುವಾರ ದಿನಗಳಲ್ಲಿ ಬಾರದಿರಲಿ ಎಂದು ಬೇಡುತಿದ್ದ ಜನರಿಗೆ ಸಂತಸದ ವಿಷಯ . ಈ ವರ್ಷ ಅನೇಕ ಹಬ್ಬಗಳು ಭಾನುವಾರ ಬಂದಿಲ್ಲ. ವಾರದ ಇತರ ದಿನಗಳಲ್ಲಿ ಹಬ್ಬಗಳು ಬಂದಿರುವುದರಿಂದ ರಜೆಗಳ ಸಂಖ್ಯೆ ಹೆಚ್ಚಾಗಿದೆ. ಸಂಪುಟ ಸಭೆ ಈ ರಜೆ ಪಟ್ಟಿಗೆ ಅನುಮೋದನೆ ನೀಡಿದೆ. ಯಾವ ಯಾವ ದಿನ ರಜೆ ಎಂದು ನೀವು ಈ ವಿಡಿಯೋದಲ್ಲಿ ತಿಳಿಯಬಹುದು .

List of holidays- 2018 by karnataka government is released today and it is really good.

Category

🗞
News

Recommended