ನ್ಯೂಸ್ ಅಗ್ರಿಗೇಟರ್, ಭಾರತದ ಅತೀ ವೇಗವಾಗಿ ಬೆಳೆಯುತ್ತಿರುವ ನ್ಯೂಸ್ ಆಪ್ 'ಡೇಲಿಹಂಟ್' ಒನ್ಇಂಡಿಯಾ ಜೊತೆ ದೇಶದ ಅತೀದೊಡ್ಡ ಸಮೀಕ್ಷೆ ನಡೆಸುತ್ತಿದೆ. #DailyhuntTRUSToftheNation ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ದೇಶದ ಮೂಲೆಮೂಲೆಯನ್ನು ತಲುಪುತ್ತಿದೆ ಮತ್ತು ಅಭಿಮತ ಸಂಗ್ರಹಿಸುತ್ತಿದೆ. ಡೇಲಿಹಂಟ್ ನಡೆಸುತ್ತಿರುವ ಈ ಮೆಗಾ ಸಮೀಕ್ಷೆಗೆ ಓದುಗರಿಂದ ಮತ್ತು ಇತರ ನೆಟ್ಟಿಗರಿಂದ ಅಭೂತಪೂರ್ವ ಸ್ಪಂದನ ದೊರೆಯುತ್ತಿದ್ದು, ಸಾಮಾಜಿಕ ತಾಣದಲ್ಲಿ ಕೂಡ ವೈರಲ್ ಆಗುತ್ತಿದೆ. ಇದರಲ್ಲಿ ಭಾಗವಹಿಸುವ ನೆಟ್ಟಿಗರು ಕನಿಷ್ಠ 8 ಪ್ರಶ್ನೆಗಳಿಗೆ ಉತ್ತರ ನೀಡಲೇಬೇಕು ಮತ್ತು ಕೊನೆಗೆ ತಮ್ಮ ಹೆಸರು ಮತ್ತು ಈಮೇಲ್ ವಿಳಾಸವನ್ನು ನಮೂದಿಸಬೇಕು. ಈ ಪೋಲ್ ನಲ್ಲಿ ನೀವೂ ಭಾಗವಹಿಸಿ, ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ. ಈ ದೇಶದ ಭವಿತವ್ಯದ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯುವ ಸಮಯವಿದು. ತಪ್ಪು ನಿರ್ಧಾರ ತೆಗೆದುಕೊಂಡು ಪರಿತಪಿಸುವ ಸಮಯವಲ್ಲವಿದು. ಸಾಮರ್ಥ್ಯವಿಲ್ಲದ ಪಕ್ಷ ಅಥವಾ ನಾಯಕ ಅಧಿಕಾರಕ್ಕೆ ಬಂದರೆ ನಂತರ ಪಶ್ಚಾತ್ತಾಪ ಪಡುವವರು ಕೂಡ ನಾವೇ. ಆದ್ದರಿಂದ ನಿರ್ಧಾರ ಬಲವಾಗಿರಲಿ, ಸಮಂಜಸವೂ ಆಗಿರಲಿ. ಇನ್ನೇಕೆ ತಡ, ದೇಶದ ಅತೀದೊಡ್ಡ ಚುನಾವಣಾ ಸಮೀಕ್ಷೆಯಲ್ಲಿ ಭಾಗವಹಿಸಿ ಮತ್ತು ನಿಮ್ಮ ಮುದ್ರೆಯನ್ನು ಒತ್ತಿರಿ.
Category
🗞
News