ಯಾವುದೇ ಊರಿಗೆ ಅಲ್ಲಿನ ದೇವತೆಗಳು ಕಾವಲಿರುತ್ತಾರೆ. ಗ್ರಾಮಗಳಿಗಾದರೆ ಗ್ರಾಮ ದೇವತೆ ಎಂದು ಕರೆಯುತ್ತಾರೆ. ಅದೇ ರೀತಿ ಯಾವುದೇ ರಾಜ್ಯದ ಆತ್ಮದಂತಿರುವ ರಾಜಧಾನಿಗೆ ಅಲ್ಲಿನ ಸ್ಥಳೀಯ ದೇವತೆಗಳನ್ನು ಗೌರವದಿಂದ ನೋಡಿಕೊಳ್ಳಬೇಕು ಹಾಗೂ ಭಕ್ತಿಯಿಂದ ಆರಾಧಿಸಬೇಕು. ಅದು ಗಂಡು ದೇವರಿರಲಿ, ಹೆಣ್ಣು ದೇವರಿರಲಿ ಆ ದೇವರಿಗೆ ಗೌರವ ನೀಡಬೇಕಾದ್ದು ಅತ್ಯಗತ್ಯ. ಬೆಂಗಳೂರಿನ ಇಂದಿನ ಸ್ಥಿತಿಗೆ ಅಂದರೆ ಗೊಂದಲ, ಬಿಬಿಎಂಪಿಯ ಅಸ್ಥಿರತೆ, ಆಕಸ್ಮಿಕ ಅವಘಡಗಳು ಹಾಗೂ ಕನ್ನಡ ಚಿತ್ರರಂಗದ ಆರಕ್ಕೇರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿ, ಯಾವುದೇ ಸರಕಾರ ಅಸ್ತಿತ್ವಕ್ಕೆ ಬಂದರೂ ನಿರಂತರವಾಗಿ ಕಾಡುವ ಗೊಂದಲ...ಇವೆಲ್ಲಕ್ಕೂ ಕಾರಣ ಆಗಿರುವುದು ಬೆಂಗಳೂರಿನಲ್ಲಿ ಆ ದೇವತೆಗಳ ನಿರ್ಲಕ್ಷ್ಯ.
Category
🗞
News