೬೨ ನೇ ಕನ್ನಡ ರಾಜ್ಯೋತ್ಸವದ ಈ ಸುಸಂಧರ್ಭದಲ್ಲಿ ವಿಶೇಷ ಕನ್ನಡಿಗರನ್ನು ನಿಮಗೆ ಪರಿಚಯಿಸುವ ಪ್ರಯತ್ನ ನಿಮ್ಮ ಒನ್ ಇಂಡಿಯಾ ಕನ್ನಡ ಮಾಡುತ್ತಿದೆ . ಇದರ ಅಂಗವಾಗಿ ಕನ್ನಡದ ವಿಶಿಷ್ಟ ಸೇವಕರನ್ನು ಹುಡುಕಿ ಹೊರಟಾಗ ನಮಗೆ ಸಿಕ್ಕ ಮೊದಲ ವ್ಯಕ್ತಿಯೇ ಚಂದ್ರೇಗೌಡ .ವೃತ್ತಿಯಲ್ಲಿ ಬಿಎಂಟಿಸಿ ನಿರ್ವಾಹಕರಾಗಿರುವ ಇವರು ಕನ್ನಡ ಸೇವೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ .ಬಿಎಂಟಿಸಿ ಸರ್ಕಾರೀ ಸಂಸ್ಥೆಯಲ್ಲಿ ಸರಿಸುಮಾರು ೧೬ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಚಂದ್ರೇಗೌಡ ಅವರು ಮೊದಲು ಚಾಲಕರಾಗಿ ನಂತರ ನಿರ್ವಾಹಕರಾಗಿರುವ ಇವರ ವಿದ್ಯಾರ್ಹತೆ ಹತ್ತನೇ ತರಗತಿ .ಕನ್ನಡ ಭಾಷೆಯ ಜೊತೆಗೆ ಆಂಗ್ಲ ಭಾಷೆಯು ನಮ್ಮ ಬದುಕಿನ ಭಾಗವಾಗಿರುವಾಗ ಅದಕ್ಕೆ ವಿರುದ್ಧವೆಂಬಂತೆ ಇವರು ತಮ್ಮ ದೈನಂದಿನ ಜೀವನದಲ್ಲಿ ಒಂದೇ ಒಂದು ಇತರೆ ಭಾಷೆಯ ಪದಗಳನ್ನು ಬಳಸದೆ ಪ್ರತಿಯೊಂದನ್ನು ಕನ್ನಡವಾಗಿಸುತ್ತ ಬೆಂಗಳೂರಿನಲ್ಲಿ ನೆಲೆಸಿರುವ ಪರಭಾಷಿಗರಿಗೂ ಕನ್ನಡವನ್ನು ಕಲಿಸುತ್ತಾ , ಬಳಸುತ್ತಾ ಜೊತೆಗೆ ಉಳಿಸುತ್ತಾ ಬೆಳೆಸುತ್ತಿದ್ದಾರೆ . ತಾವು ಪ್ರಯಾಣಿಸುವ ಮಾರ್ಗದ ಬಸ್ಸಿನಲ್ಲಿ ತನ್ನೆಲ್ಲ ವ್ಯವಹಾರಗಳನ್ನು , ನಿಲ್ದಾಣಗಳ ಹೆಸರುಗಳನ್ನೂ ಮತ್ತು ತಮ್ಮ ಸಹೋದ್ಯೋಗಿಗಳ ಜೊತೆ ಮಾತುಕತೆ ಹೀಗೆ ಪ್ರತಿಯೊಂದನ್ನು ಕನ್ನಡದಲ್ಲೇ ಮಾಡುತ್ತಾ ಕನ್ನಡದಲ್ಲೇ ಉಸಿರಾಡುತ್ತಿದ್ದಾರೆ . ಇದಲ್ಲದೆ ಇವರ ಈ ಸೇವೆಯನ್ನು ಗಮನಿಸಿ ಹಲವಾರು ಖಾಸಗಿ ಪ್ರಶಸ್ತಿಗಳು ಅರಸಿ ಬಂದಿವೆ..
Category
🗞
News