• 8 years ago
After Growing Popular With His Rhyming Skills, Rapper Chandan Shetty Will Soon be Seen as Lead in Vichitra Prema Kathe. Directed by Ravi Varma.

ಕನ್ನಡದ Rap ಸ್ಟಾರ್ ಚಂದನ್ ಶೆಟ್ಟಿ ತಮ್ಮ ಡಿಫ್ರೆಂಟ್ ಆಲ್ಬಂಗಳಿಂದ ಸಾವಿರಾರು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಒಂದಕ್ಕಿಂತ ಒಂದು ಹೊಸ ಸ್ಟೈಲ್ ಹಾಡುಗಳನ್ನ ಸಂಗೀತ ಪ್ರಿಯರಿಗೆ ನೀಡುತ್ತಾ ಬಂದಿರುವ Rapper ಚಂದನ್ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

ಹೌದು, Rap ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ ಈಗ ಸ್ಯಾಂಡಲ್ ವುಡ್ ಬೆಳ್ಳಿತೆರೆಯ ಮೇಲೆ ಮಿಂಚಲಿದ್ದಾರೆ. ಅದು ಹಾಡುಗಾರ ಅಥವಾ ಸಂಗೀತಗಾರನಾಗಿ ಅಲ್ಲ. ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಲಿದ್ದಾರೆ.

ಅಷ್ಟಕ್ಕೂ, Rapper ಚಂದನ್ ಶೆಟ್ಟಿ ಅಭಿನಯಿಸಲಿರುವ ಚೊಚ್ಚಲ ಚಿತ್ರ ಯಾವುದು? ಯಾರು ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ .

ಇಷ್ಟು ದಿನ ಆಲ್ಬಂ ಸಾಂಗ್ ಗಳಲ್ಲಿ ಕುಣಿದು ಅಭಿಮಾನಿಗಳನ್ನ ಕುಣಿಸುತ್ತಿದ್ದ ಚಂದನ್ ಶೆಟ್ಟಿ ತಮ್ಮ ಚೊಚ್ಚಲ ಚಿತ್ರಕ್ಕೆ ಸಿದ್ದವಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯನ್ನ ಸೃಷ್ಟಿಸಿದ್ದ ಚಂದನ್ ಈಗ ಅಭಿನಯ ಕ್ಷೇತ್ರಕ್ಕೆ ಧುಮುಕಿದ್ದಾರೆ.

ಚಂದನ್ ನಾಯಕನಾಗಿ ಅಭಿನಯಿಸಲಿರುವ ಚೊಚ್ಚಲ ಚಿತ್ರದ ಹೆಸರು 'ವಿಚಿತ್ರ ಪ್ರೇಮ ಕಥೆ' ಈ ಚಿತ್ರವನ್ನ ರವಿವರ್ಮ ನಿರ್ದೇಶನ ಮಾಡಲಿದ್ದಾರೆ.

ಗಣೇಶ್ ಅಭಿನಯದ 'ಸಂಗಮ', ಅಜಯ್ ರಾವ್ ಅಭಿನಯದ 'ಜೈ ಭಜರಂಗಿ ಬಲಿ' ಸೇರಿದಂತೆ ಕನ್ನಡದ ಹಲವು ಚಿತ್ರಗಳಿಗೆ ರವಿವರ್ಮ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸುಮಾರು 400 ಕ್ಕೂ ಹೆಚ್ಚು ಹಾಡುಗಳಲ್ಲಿ ಕೆಲಸ ಮಾಡಿದ್ದಾರಂತೆ.

ಇನ್ನು ಈ ಚಿತ್ರವನ್ನ ಗುಬ್ಬಿ ವೀರಣ್ಣ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದು, ಚಂದನ್ ಶೆಟ್ಟಿ ಈ ಚಿತ್ರದಲ್ಲಿ ಕೇವಲ ನಾಯಕನಾಗಿ ಮಾತ್ರವಲ್ಲ, ಸಂಗೀತ ನಿರ್ದೇಶಕನಾಗಿಯೂ ಕೆಲಸ ಮಾಡಲಿದ್ದಾರಂತೆ.

ಅಂದ್ಹಾಗೆ, ನಿರ್ದೇಶಕ ರವಿವರ್ಮ ಅವರ ಮಗ ಚಂದನ್ ಶೆಟ್ಟಿ ಅವರ ದೊಡ್ಡ ಅಭಿಮಾನಿ. ಇನ್ನು ರವಿವರ್ಮ ಅವರು ಕೂಡ ಚಂದನ್ ಅವರ ಆಲ್ಬಂಗಳಲ್ಲಿ ಅವರ ಅಭಿನಯ ನೋಡಿದ್ದು ಚಂದನ್ ಬಗ್ಗೆ ಭರವಸೆ ಹೊಂದಿದ್ದರಂತೆ. ಹೀಗಾಗಿ, ಈ ಪಾತ್ರಕ್ಕೆ ಚಂದನ್ ಸೂಕ್ತವೆಂದು ಆಯ್ಕೆ ಮಾಡಿಕೊಂಡರಂತೆ.

ಈಗಾಗಲೇ ಚಿತ್ರದ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ ಜುಲೈ 12 ರಿಂದ ಶೂಟಿಂಗ್ ಗೆ ಮಾಡಲು ನಿರ್ಧರಿಸಿದ್ದಾರಂತೆ. ಚಿತ್ರಕಥೆ ಬಗ್ಗೆ ಹೆಚ್ಚೇನೂ ಬಿಟ್ಟುಕೊಡದ ಚಿತ್ರತಂಡ ಕುತೂಹಲವಾಗಿಟ್ಟಿದೆ. ಇನ್ನು ಈ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

Category

🗞
News

Recommended