Skip to playerSkip to main contentSkip to footer
  • 11/20/2017
'ಬಿಕಿನಿ' ಬಗ್ಗೆ ಮಾತನಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್! ಸಿನಿಮಾ ರಂಗಕ್ಕೂ ಬಿಕಿನಿಗೂ ದೊಡ್ಡ ನಂಟು ಇದೆ. ಹಾಲಿವುಡ್ ಚಿತ್ರದಿಂದ ಹಿಡಿದು ಸ್ಯಾಂಡಲ್ ವುಡ್ ವರೆಗೆ ಬಿಕಿನಿ ಸುದ್ದಿ ಬಂದರೆ ಸಾಕು ಎಲ್ಲರ ಕಿವಿ ನೆಟ್ಟಗಾಗುತ್ತದೆ. ಕನ್ನಡದಲ್ಲಿಯೂ ಈಗಾಗಲೇ ಅನೇಕ ನಟಿಯರು ಬಿಕಿನಿ ಧರಿಸಿ ದೊಡ್ಡ ಸುದ್ದಿ ಮಾಡಿದ್ದಾರೆ. ಆದರೆ ನಟಿ ರಚಿತಾ ರಾಮ್ ಮಾತ್ರ ಇದುವರೆಗೆ ಬಿಕಿನಿ ಹಾಕಿಲ್ಲ. ಜೊತೆಗೆ ಗ್ಲಾಮರ್ ಪಾತ್ರಕ್ಕಿಂತ ಹೆಚ್ಚು ಹೋಮ್ಲಿ ಪಾತ್ರಗಳನ್ನೇ ರಚಿತಾ ಮಾಡಿದ್ದರು. ಹೀಗಿರುವಾಗಲೇ, ರಚಿತಾ ರಾಮ್ ಮೊದಲ ಬಾರಿಗೆ ಬಿಕಿನಿ ಬಗ್ಗೆ ಮಾತನಾಡಿದ್ದಾರೆ.''ಜಾನಿ ಜಾನಿ ಎಸ್ ಪಪ್ಪ' ಚಿತ್ರದಲ್ಲಿ ನಾನು ಎನ್.ಆರ್.ಐ ಕುಟುಂಬದ ಪ್ರಿಯಾ ಎನ್ನುವ ಹುಡುಗಿಯ ಪಾತ್ರ ಮಾಡುತ್ತಿದ್ದು, ಈ ಪಾತ್ರ ಸ್ವಲ್ಪ ಗ್ಲಾಮರಸ್ ಆಗಿದೆ'' ಎಂದು ಗ್ಲಾಮರ್ ಬಗ್ಗೆ ರಚಿತಾ ತಮ್ಮ ವ್ಯಾಖ್ಯಾನ ನೀಡಿದರು.

Recommended