Skip to playerSkip to main contentSkip to footer
  • 11/11/2017
ಕನ್ನಡದ ಪ್ರತಿಷ್ಠಿತ ಸಿನಿಮಾ 'ಕುರುಕ್ಷೇತ್ರ' ಚಿತ್ರದಲ್ಲಿ ನಟ ರವಿಚಂದ್ರನ್ ಕೃಷ್ಣನ ಪಾತ್ರವನ್ನು ಮಾಡಿದ್ದಾರೆ. ದರ್ಶನ್ ಅಭಿನಯದ 50ನೇ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಕೃಷ್ಣನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೇ ಮೊದಲ ಬಾರಿಗೆ ನಟ ರವಿಚಂದ್ರನ್ 'ಕುರುಕ್ಷೇತ್ರ' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ರವಿಚಂದ್ರನ್ 'ಕುರುಕ್ಷೇತ್ರ'ದ ತಮ್ಮ ಕೃಷ್ಣನ ಪಾತ್ರ ಬಗ್ಗೆ ಇರುವ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. '57ನೇ ವಯಸ್ಸಿನಲ್ಲಿ ಈ ಹೊಟ್ಟೆ ಇಟ್ಟುಕೊಂಡು ನಾನು ಕೃಷ್ಣನ ಪಾತ್ರ ಮಾಡುತ್ತೇನೆ ಎಂದು ಕನಸಿನಲ್ಲಿಯೂ ಯೋಚನೆ ಮಾಡಿರಲಿಲ್ಲ. ಅದೇ ರೀತಿ ಎಲ್ಲರಿಗೂ ರವಿಚಂದ್ರನ್ ಗಡ್ಡ ತೆಗೆದರೆ ಹೇಗೆ ಕಾಣುತ್ತಾರೆ ಎನ್ನುವ ಪ್ರಶ್ನೆ ಇತ್ತು.' 'ಮೊದಲು 'ಕುರುಕ್ಷೇತ್ರ' ಚಿತ್ರಕ್ಕಾಗಿ ಮುನಿರತ್ನ ಅವರು ಮಾತನಾಡಿದಾಗ ನಾನು ನಂಬಿರಲಿಲ್ಲ. ನಂಗೆ ಹೊಟ್ಟೆ ಇದೆ. ಇವರು ಕೃಷ್ಣನ ಪಾತ್ರವನ್ನು ಬೇರೆಯವರಿಗೆ ಚೇಂಜ್ ಮಾಡಬಹುದು ಎಂದುಕೊಂಡಿದೆ. ಅದಕ್ಕೆ ಈ ಚಿತ್ರವನ್ನು ನಾನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೆ ಮುನಿರತ್ನ ಬಂದು ಅಡ್ವಾನ್ಸ್ ಕೊಟ್ಟ ಮೇಲೆ ನನಗೂ ಚಿತ್ರದ ಬಗ್ಗೆ ಪಕ್ಕಾ ಆಯ್ತು


kurukshetra still continues to grab people's attention . watch what Ravichandran has to say about the movie and his role

Category

🗞
News

Recommended