Skip to playerSkip to main contentSkip to footer
  • 11/21/2017
Will Zee Kannada Channel head Raghavendra Hunsur quit Zee Kannada..? Here is the clarity.


'ಜೀ ಕನ್ನಡ' ತೊರೆಯುವ ಸುದ್ದಿ ಬಗ್ಗೆ ರಾಘವೇಂದ್ರ ಹುಣಸೂರು ಹೇಳಿದ್ದೇನು? ಕನ್ನಡದ ಜನಪ್ರಿಯ ವಾಹಿನಿ 'ಜೀ ಕನ್ನಡ'ದ ಪ್ರೋಗ್ರಾಮಿಂಗ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು 'ಜೀ ಕನ್ನಡ' ಚಾನೆಲ್ ಬಿಡುವ ಮನಸು ಮಾಡಿದ್ದಾರೆ ಎನ್ನುವ ಸುದ್ದಿ ಈಗ ಎಲ್ಲೆಡೆ ಹರಿದಾಡಿದೆ. ಈಗಾಗಲೇ ಕನ್ನಡ ಕಿರುತೆರೆಗೆ ಸಾಕಷ್ಟು ಸೂಪರ್ ಹಿಟ್ ಕಾರ್ಯಕ್ರಮಗಳನ್ನು ನೀಡಿರುವ ಇವರು ಈಗ 'ಜೀ ಕನ್ನಡ' ಬಿಟ್ಟು ಬೇರೆ ವಾಹಿನಿ ಸೇರಿಕೊಳ್ಳುತ್ತಾರೆ ಎನ್ನುವ ಮಾತಿದೆ. ಆದರೆ ಈ ಬಗ್ಗೆ ಸ್ವತಃ ರಾಘವೇಂದ್ರ ಹುಣಸೂರು ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ದೊಂದಿಗೆ ಮಾತನಾಡಿದ್ದಾರೆ.'ಜೀ ಕನ್ನಡ' ವಾಹಿನಿಯಲ್ಲಿ ಸದ್ಯ ಬಿಸಿನೆಸ್ ಮತ್ತು ಪ್ರೋಗ್ರಾಮಿಂಗ್ ಹೆಡ್ ಆಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ಹುಣಸೂರು ಇದೀಗ 'ಸ್ಟಾರ್ ಸುವರ್ಣ' ವಾಹಿನಿಗೆ ಹೋಗ್ತಾರೆ ಎನ್ನುವ ಸುದ್ದಿ ಇದೆ.'ಇತರ ವಾಹಿನಿಯಿಂದ ಆಫರ್ ಬಂದಿರುವುದು ನಿಜ. ಆದರೆ ನಾನು 'ಜೀ ಕನ್ನಡ' ವಾಹಿನಿ ಬಿಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ಪ್ರೋಗ್ರಾಮಿಂಗ್ ಹೆಡ್

Category

🗞
News

Recommended