• 8 years ago
Kannada Actor sathish neenasam Plannig to do Sequel of Kashinath's Anubhava Movie. But the latest we hear is that filmmaker Nirbhay, who owns the rights to the title, is all set to make a film in that name.

1984ರಲ್ಲಿ ಕಾಶೀನಾಥ್ ನಟಿಸಿ, ನಿರ್ದೇಶನ ಮಾಡಿದ್ದ ಸೂಪರ್ ಹಿಟ್ ಚಿತ್ರ 'ಅನುಭವ'. ಈಗ ಈ ಚಿತ್ರದ ಟೈಟಲ್ ಗಾಗಿ ಕನ್ನಡ ಚಿತ್ರರಂಗದಲ್ಲಿ ಬಾರಿ ಪೈಪೋಟಿ ನಡೆಯುತ್ತಿದೆ. ಇತ್ತೀಚೆಗಷ್ಟೇ ನಟ ನೀನಾಸಂ ಸತೀಶ್ 'ಅನುಭವ-2' ಸಿನಿಮಾ ಮಾಡಲು ಚಿಂತಿಸಿರುವುದಾಗಿ ಸುದ್ದಿಯಾಗಿತ್ತು. ಹೀಗಿರುವಾಗ, 'ಅನುಭವ' ಟೈಟಲ್ ಗೆ ವಿಘ್ನ ಎದುರಾಗಿದೆ. ಯಾಕಂದ್ರೆ, ಕನ್ನಡ ಮತ್ತೊಬ್ಬ ನಿರ್ದೇಶಕ ಈಗಾಗಲೇ 'ಅನುಭವ-2' ಟೈಟಲ್ ನೋಂದಣಿ ಮಾಡಿದ್ದಾರೆ. ಈ ಚಿತ್ರ ಖ್ಯಾತ ನಟಿಯ ಬಯೋಗ್ರಫಿ ಆಗಿದ್ದು, ದಕ್ಷಿಣ ಭಾರತದ ಸ್ಟಾರ್ ನಟ ಹಾಗೂ ನಟಿ ಅಭಿನಯಿಸುವ ಸಾಧ್ಯತೆ ಇದೆಯಂತೆ. ಈ ಇಬ್ಬರ ಮಧ್ಯೆ ಮತ್ತೋರ್ವ ನಿರ್ದೇಶಕನೂ ಕೂಡ 'ಅನುಭವ' ಟೈಟಲ್ ಹಿಂದೆ ಬಿದ್ದಿದ್ದಾರಂತೆ. ಹಾಗಿದ್ರೆ, ಅನುಭವ ಟೈಟಲ್ ಯಾರಿಗೆ ಸಿಗುತ್ತೆ?

ನೀನಾಸಂ ಸತೀಶ್ ಅವರ 'ಅನುಭವ-2' ಕಾಶೀನಾಥ್ 'ಅನುಭವ' ಚಿತ್ರದ ಮುಂದುವರೆದ ಭಾಗವಾಗಿದ್ದು, ಈ ಚಿತ್ರದಲ್ಲಿ ಸಿಂಧು ಲೋಕನಾಥ್ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಉದಯ್ ಮೆಹ್ತಾ ನಿರ್ಮಾಣ ಮಾಡಲಿದ್ದು, ಅರಸು ಅಂತಾರೆ ನಿರ್ದೇಶನವಿದೆಯಂತೆ.

'ವಿಜಯಾಧಿತ್ಯ' ಚಿತ್ರದ ನಿರ್ದೇಶಕ ನಿರ್ಭಯ್ ಚಕ್ರವರ್ತಿ ಅವರ ಬಳಿ 'ಅನುಭವ-2' ಚಿತ್ರದ ಟೈಟಲ್ ಇದೆ. 'ವಿಜಯಾಧಿತ್ಯ' ಚಿತ್ರದ ನಂತರ ನಿರ್ಭಯ್ ಚಕ್ರವರ್ತಿ 'ಅನುಭವ-2' ಸಿನಿಮಾ ಮಾಡಲಿದ್ದಾರಂತೆ. ಇವರ ಚಿತ್ರಕ್ಕೂ, ಕಾಶೀನಾಥ್ ಅವರ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಬದಲಾಗಿ ಇದು ಖ್ಯಾತ ನಟಿಯ ಜೀವನಕಥೆಯಾಗಿರಲಿದೆಯಂತೆ.

ನಿರ್ಭಯ್ ಚಕ್ರವರ್ತಿ ನಿರ್ದೇಶನ ಮಾಡಲಿರುವ 'ಅನುಭವ-2' ಚಿತ್ರ ಖ್ಯಾತ ನಟಿಯ ಜೀವನ ಕಥೆಯಾಗಿದ್ದು, ಈ ಚಿತ್ರಕ್ಕಾಗಿ ಬಹುಭಾಷಾ ನಟಿ ನಯನತಾರ ಅಥವಾ ವಿದ್ಯಾಬಾಲನ್ ಅವರನ್ನ ಆಯ್ಕೆ ಮಾಡಿಕೊಳ್ಳಲು ಚಿಂತಿಸಲಾಗಿದೆಯಂತೆ. ಮತ್ತೊಂದೆಡೆ ತೆಲುಗು ನಟ ಜಗಪತಿ ಬಾಬು ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

'ಅನುಭವ-2' ಟೈಟಲ್ ಗಾಗಿ ಈಗಾಗಲೇ ಪೈಪೋಟಿ ನಡೆಯುತ್ತಿದ್ದರೇ, ಮತ್ತೊಬ್ಬ ನಿರ್ದೇಶಕನೂ ಕೂಡ ಅನುಭವದ ಮೇಲೆ ಕಣ್ಣಾಕಿದ್ದಾರಂತೆ. 'ತರ್ಲೆ ನನ್ ಮಕ್ಳು' ಚಿತ್ರ ಮಾಡಿದ್ದ ನಿರ್ದೇಶಕ ರಾಕಿ 'ಎರಡನೇ ಅನುಭವ' ಎನ್ನುವ ಹೆಸರಿನಲ್ಲಿ ಸಿನಿಮಾ ಮಾಡಲು ಸಿದ್ದವಾಗುತ್ತಿದ್ದಾರಂತೆ. ಈ ಚಿತ್ರಕ್ಕೆ ಶುಭಾ ಪೂಂಜಾ ನಾಯಕಿಯಂತೆ.

Category

🗞
News

Recommended