Skip to playerSkip to main contentSkip to footer
  • 1/11/2018
ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಹೊಂದಿರುವ ಧಾರಾವಾಹಿಗಳ ಪೈಕಿ 'ಪುಟ್ಟಗೌರಿ ಮದುವೆ' ಕೂಡ ಒಂದು. ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿರುವ 'ಪುಟ್ಟಗೌರಿ ಮದುವೆ', ಅಷ್ಟೇ ಟ್ರೋಲ್ ಕೂಡ ಆಗಿದೆ.ಅದರಲ್ಲೂ, 'ಪುಟ್ಟಗೌರಿ' ಕಾಡಿಗೆ ಹೋಗಿ ಹಾವಿನ ಕಪಾಳಕ್ಕೆ ಹೊಡೆದು, ಕೊಲ್ಲಲು ಬಂದಿದ್ದ ಹುಲಿಯನ್ನೇ ಹೆದರಿಸಿ ವಾಪಸ್ ಕಳುಹಿಸಿ, ನರಭಕ್ಷರ ಮನಃಪರಿವರ್ತನೆ ಮಾಡಿದ್ಮೇಲೆ ಯದ್ವಾತದ್ವಾ ಟ್ರೋಲ್ ಆಗಿತ್ತು.''ಪುಟ್ಟಗೌರಿ'ಗೆ ಶೌರ್ಯ ಪ್ರಶಸ್ತಿ ನೀಡಬೇಕು'' ಎಂದು ಎಲ್ಲ ಟ್ರೋಲ್ ಪೇಜ್ ಗಳು ಕಾಲೆಳೆಯಲು ಶುರು ಮಾಡಿದ್ರು. ''ಪುಟ್ಟಗೌರಿ ಸಾಯಲ್ಲ, ಸೀರಿಯಲ್ ಮುಗಿಯಲ್ಲ'' ಎಂದು ಬೇಸತ್ತ ವೀಕ್ಷಕರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈಗ 'ಪುಟ್ಟಗೌರಿ ಮದುವೆ' ಸೀರಿಯಲ್ ಅಂತೂ ಮುಗಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಆದ್ರೆ, ಸೀರಿಯಲ್ ಸಹವಾಸ ಸಾಕು... ಇನ್ಮುಂದೆ ಯಾವುದೇ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಅಂತ 'ಪುಟ್ಟಗೌರಿ' ರಂಜನಿ ರಾಘವನ್ ಹೇಳಿದ್ದಾರೆ.

Category

🗞
News

Recommended