Skip to playerSkip to main contentSkip to footer
  • 2/8/2018
Kannada Actress, Beladingala Bale movie fame Suman Nagarkar turns Producer for 'Babru'.

ಸುಮನ್ ನಗರ್ಕರ್ ಎಂದ ಕೂಡಲೆ ಕನ್ನಡ ಸಿನಿ ಪ್ರೇಮಿಗಳಿಗೆ ಥಟ್ ಅಂತ ನೆನಪಾಗುವುದು 'ಬೆಳದಿಂಗಳ ಬಾಲೆ' ಸಿನಿಮಾ. ಹಾಗ್ನೋಡಿದ್ರೆ, 'ಬೆಳದಿಂಗಳ ಬಾಲೆ' ಸಿನಿಮಾದಲ್ಲಿ ಸುಮನ್ ನಗರ್ಕರ್ ಅವರ ಬೆಳ್ಳಿಯಂಥ ಮುಖ ಕಾಣಿಸುವುದೇ ಕಮ್ಮಿ. ಆದರೂ, ಈ ಚಿತ್ರದಿಂದಲೇ ಸುಮನ್ ಹೆಸರುವಾಸಿ ಆದರು. 'ಹೂಮಳೆ', 'ನಮ್ಮೂರ ಮಂದಾರ ಹೂವೆ', 'ನಿಷ್ಕರ್ಷ' ಮುಂತಾದ ಚಿತ್ರಗಳಲ್ಲಿ ಮಿಂಚಿದ್ದ ಸುಮನ್ ನಗರ್ಕರ್ ಮದುವೆ ಆದ್ಮೇಲೆ ಅಮೇರಿಕಾದಲ್ಲೇ ಸೆಟಲ್ ಆದರು. ಸುಮಾರು ಒಂದು ದಶಕ ಬಣ್ಣದ ಬದುಕಿನಿಂದ ದೂರ ಉಳಿದಿದ್ದ ಸುಮನ್ ನಗರ್ಕರ್, ಎರಡು ವರ್ಷಗಳ ಹಿಂದೆಯಷ್ಟೇ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ರೇ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಸುಮನ್ ನಗರ್ಕರ್ ಬಣ್ಣ ಹಚ್ಚಿದ್ದಾರೆ. ನಟಿಸುವುದರ ಜೊತೆಗೆ ಚಿತ್ರವೊಂದರ ನಿರ್ಮಾಣ ಕೂಡ ಮಾಡಿದ್ದಾರೆ. ಯಾವುದು ಆ ಸಿನಿಮಾ ಅಂತೀರಾ.?

Category

🗞
News

Recommended