• 7 years ago
Kannada actor Shiva Rajkumar's 'Tagaru' movie craze. The movie will be releasing on February 23th. The movie is directed by Duniya Suri.

ಶಿವರಾಜ್ ಕುಮಾರ್ ಅಭಿನಯದ ಎಲ್ಲ ಸಿನಿಮಾಗಳಿಗೆ ಕ್ರೇಜ್ ಇದ್ದೆ ಇರುತ್ತದೆ. ಆದರೆ 'ಟಗರು' ಸಿನಿಮಾಗೆ ಇರುವ ಕ್ರೇಜ್ ಮಾತ್ರ ಸಿಕ್ಕಾಪಟ್ಟೆ ಜೋರಾಗಿದೆ. 'ಟಗರು' ಡಿ.ಜೆ ನೈಟ್ ಕಾರ್ಯಕ್ರಮದ ನಂತರ ಈಗ ಮತ್ತೆ 'ಟಗರು' ಸೌಂಡ್ ಮಾಡುತ್ತಿದೆ. 'ಟಗರು' ಚಿತ್ರದ ಟೈಟಲ್ ಟ್ರ್ಯಾಕ್ ಈಗಾಗಲೇ ಸೂಪರ್ ಹಿಟ್ ಆಗಿದೆ. ಇದೇ ಹಾಡಿಗೆ ಈಗ ಬೆಂಗಳೂರಿನ ಮಹಿಳೆಯರು ಹೆಜ್ಜೆ ಹಾಕಿದ್ದಾರೆ. ಬಸವೇಶ್ವರ ನಗರದ ಆಪಲ್ ಫಿಟ್ನೆಸ್ ಸೆಂಟರ್ ನಲ್ಲಿ ಸರಿಸುಮಾರು 40 ಜನ ಡ್ಯಾನ್ಸರ್ಸ್ 'ಟಗರು' ಚಿತ್ರದ 'ಟಗರು ಒಂತು ಟಗರು..' ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅದರಲ್ಲಿಯೂ ಅನೇಕ ಸಂಖ್ಯೆಯ ಮಹಿಳೆಯರು ಇದರಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.

Category

🗞
News

Recommended