ರಾಜ್ಯದ ನೂತನ ಡಿಜಿ ಮತ್ತು ಐಜಿಪಿಯಾಗಿ ಐಪಿಎಸ್ ಅಧಿಕಾರಿ ನೀಲಮಣಿ ರಾಜು ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ ಎಂಬ ಹೆಗ್ಗಳಿಕೆಯನ್ನು ನೀಲಮಣಿ ರಾಜು ಅವರು ಪಡೆದಿದ್ದಾರೆ. ಇದೇ ರೀತಿ ಕನ್ನಡದ ಅನೇಕ ಸಿನಿಮಾಗಳಲ್ಲಿಯೂ ಮಹಿಳಾ ಪೋಲೀಸ್ ಖದರ್ ಅನ್ನು ತೋರಿಸಲಾಗಿದೆ. ಅಂದಿನ ಚಿತ್ರದಿಂದ ಹಿಡಿದು ಇಂದಿನ ಸಿನಿಮಾಗಳವರೆಗೆ ಅನೇಕ ನಾಯಕಿಯರು ಖಾಕಿ ತೊಟ್ಟು ತಮ್ಮ ಪವರ್ ಪ್ರದರ್ಶಿಸಿದ್ದಾರೆ. ಪೋಲೀಸ್ ಪಾತ್ರವನ್ನು ಮಾಡುವುದರಲ್ಲಿ ನಟಿ ಮಾಲಾಶ್ರೀ ಎತ್ತಿದ ಕೈ. ತಮ್ಮ ಅದೆಷ್ಟೋ ಚಿತ್ರದಲ್ಲಿ ಮಾಲಾಶ್ರೀ ಖಾಕಿ ಧರಿಸಿ ಮಿಂಚಿದ್ದಾರೆ. ಅದರಲ್ಲಿ 'ಲೇಡಿ ಪೊಲೀಸ್' ಚಿತ್ರ ಕೂಡ ಒಂದಾಗಿದೆ. ಹೆಚ್ಚಾಗಿ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಳ್ಳುವ ಪ್ರೇಮ 'ಝಾನ್ಸಿ ಐಪಿಎಸ್' ಎಂಬ ಚಿತ್ರದಲ್ಲಿ ಪೊಲೀಸ್ ಪಾತ್ರವನ್ನು ಮಾಡಿದ್ದರು.
Category
🗞
News