• 7 years ago
ಸಿನಿಮಾ ಲೋಕದಲ್ಲಿ ನಡೆಯುವ ಲೈಂಗಿಕ ಕಿರುಕುಳ, ನಾಯಕಿಯರ ಮೇಲೆ ದೌರ್ಜನ್ಯದ ಕುರಿತು ಒಬ್ಬರ ಹಿಂದೆ ಒಬ್ಬರಂತೆ ನಟಿಯರು ಮಾತನಾಡುತ್ತಿದ್ದಾರೆ. ತೆರೆ ಹಿಂದೆ ನಡೆದ ಕರಾಳ ನೋವನ್ನ ಸಮಾಜದ ಮುಂದೆ ಬಿಚ್ಚಿಡುತ್ತಿದ್ದಾರೆ. ಇದೀಗ, ಬಿ-ಟೌನ್ ನಟಿ ರಿಚಾ ಚಡ್ಡಾ ಬಣ್ಣದ ಲೋಕದ ಇನ್ನೊಂದು ಮುಖವನ್ನ ಬಹಿರಂಗಪಡಿಸಿದ್ದಾರೆ. ಅದರಲ್ಲೂ, ಬಾಲಿವುಡ್ ಇಂಡಸ್ಟ್ರಿಯ ಕರಾಳ ಪರಿಚಯವನ್ನ ಮಾಡಿದ್ದಾರೆ.ಹಾಲಿವುಡ್ ನಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಅಭಿಯಾನ ಆರಂಭವಾಗಿದೆ. ಅದೇ ರೀತಿ ಬಾಲಿವುಡ್ ನಲ್ಲಿ ಆಗಬೇಕಿದೆ. ಒಂದು ವೇಳೆ ಈ ರೀತಿ ಇಲ್ಲಿಯೂ ಆದ್ರೆ, ಸಾಕಷ್ಟು ನಟರು, ನಿರ್ಮಾಪಕರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ನಟಿ ರಿಚಾ ಟೀಕಿಸಿದ್ದಾರೆ. ''ಹಾಲಿವುಡ್ ನಂತೆ ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ರೆ, ಬಾಲಿವುಡ್ ಇಂಡಸ್ಟ್ರಿ ಅನೇಕ ನಟರು ಹಾಗೂ ನಿರ್ದೇಶಕರನ್ನ ಕಳೆದುಕೊಳ್ಳಲಿದೆ''.''ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವ ಹಾಗೂ ಪ್ರಗತಿಪರರು ಎನ್ನುತ್ತಿರುವ ನಿರ್ಮಾಪಕರು ಕೂಡ ನಾಶವಾಗ್ತಾರೆ'' .ಬಾಲಿವುಡ್ ನಲ್ಲಿ ನಟಿ ರಿಚಾ ಎದುರಿಸಿದ್ದ ನಿರ್ದಿಷ್ಟ ಘಟನೆಯನ್ನು ವಿವರಿಸುವ ಬದಲು, ಯುವ ಕಲಾವಿದರು ನಿರಂತರ ಕಿರುಕುಳವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್ ನಲ್ಲಿ ಲೈಂಗಿಕ ದೌರ್ಜನ್ಯ ನಿರಂತರವಾಗಿದೆ ಎಂಬುದನ್ನ ಪರೋಕ್ಷವಾಗಿ ತಿಳಿಸಿದ್ದಾರೆ.

When Bollywood opens up on sexual harassment, we will lose a lot of heroes” said Actress richa chadda

Recommended