• 8 years ago
ವೇಣುಗೋಪಾಲ್ ಲೈಂಗಿಕ ಸಾಹಸದ ಬಗ್ಗೆ ಸರಿತಾ ನಾಯರ್ ಹೇಳಿಕೆಗಳು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರ ಮೇಲೆ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪ ಬಿಜೆಪಿ ನಾಯಕರಿಗೆ ಸರಿಯಾಗಿ ತಗಲ್ಹಾಕಿಕೊಂಡಂತೆ ಆಗಿದೆ. ಕೇರಳದ ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ನ ಹೇಳಿಕೆ ಆಧರಿಸಿ ಸಿದ್ಧಪಡಿಸಿರುವ ನ್ಯಾಯಾಂಗ ವರದಿಯಲ್ಲಿ ವೇಣುಗೋಪಾಲ್ ರ ಲೈಂಗಿಕ ದೌರ್ಜನ್ಯದ ವಿವರಗಳು ಎಳೆ ಎಳೆಯಾಗಿ ದಾಖಲಾಗಿವೆ.ಟೀಂ ಸೋಲಾರ್ ಬ್ರ್ಯಾಂಚ್ ಉದ್ಘಾಟನೆಗೆ ವೇಣುಗೋಪಾಲ್ ರನ್ನು ಆಹ್ವಾನಿಸಲು ತೆರಳಿದಾಗ ಸರಿತಾರ ಹಿಂಭಾಗವನ್ನು ಸವರಿದ್ದಾರೆ. ಈ ಘಟನೆಗೆ ಅಂದು ಸರಿತಾ ಜತೆಗೆ ತೆರಳಿದ್ದ ಜನರಲ್ ಮ್ಯಾನೇಜರ್ ಸಾಕ್ಷಿಯಾಗಿದ್ದಾರೆ. ಅಸಲಿಗೆ ಅಂದಿನ ಘಟನೆಯಲ್ಲಿ ಆಕೆಯನ್ನು ಆ ಜನರಲ್ ಮ್ಯಾನೇಜರ್ ಸುಮ್ಮನಾಗಿಸಿದ್ದಾರೆ.ಆ ಘಟನೆಯ ನಂತರದ ಕೆಲ ದಿನಗಳಿಗೆ ವೇಣುಗೋಪಾಲ್ 'ತುಂಬಾ ಮೃದುವಾಗಿತ್ತು', 'ಸ್ಟಿಲ್ ಲವ್ ಯೂ' ಎಂದು ಸರಿತಾ ಮೊಬೈಲ್ ಗೆ ಸಂದೇಶ ಕಳುಹಿಸಿದ್ದಾರೆ. ನೀನು ದೆಹಲಿಗೆ ಬಂದರಷ್ಟೇ ಬ್ರ್ಯಾಂಚ್ ಉದ್ಘಾಟನೆಗೆ ಬರುವುದಾಗಿ ಫೋನ್ ನಲ್ಲಿ ಹೇಳಿದ್ದಾರೆ.

Category

🗞
News

Recommended