ಈ ಹಿಂದೆ ಯಡಿಯೂರಪ್ಪನವರ ಸರಕಾರದ ಅವಧಿಯಲ್ಲಿ ಮುಜರಾಯಿ ಸಚಿವರಾಗಿದ್ದಂತಹ ಎಸ್ ಎನ್ ಕೃಷ್ಣಯ್ಯ ಶೆಟ್ಟಿ ಈ ಬಾರಿ ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಕಳೆದ ಬಾರಿ ಬಿಜೆಪಿ ಟಿಕೆಟ್ ಸಿಗದೇ ಇದ್ದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಶೆಟ್ರು ಕಣಕ್ಕಿಳಿದು, ಸೋಲು ಅನುಭವಿಸಿದ್ದರು. ಟಿಕೆಟ್ ವಿಚಾರದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕೃಷ್ಣಯ್ಯ ಶೆಟ್ಟಿಯವರು ಬಂದಷ್ಟೇ ವೇಗದಲ್ಲಿ ಮತ್ತೆ ಬಿಜೆಪಿ ಗೂಡು ಸೇರಿಕೊಂಡಿದ್ದರು. ಕಳೆದ ಚುನಾವಣೆಯೇ ಬೇರೆ, ಈ ಬಾರಿಯ ಚುನಾವಣೆಯೇ ಬೇರೆ ಎನ್ನುವ ಶೆಟ್ರು ಮಿನಿಮಮ್ ಐವತ್ತು ಸಾವಿರ ಲೀಡ್ ನಿಂದ ಜಯಭೇರಿ ಬಾರಿಸುತ್ತೇನೆ ಎನ್ನುವ ವಿಶ್ವಾಸದಲ್ಲಿದ್ದಾರೆ.
Category
🗞
News