• 7 years ago
ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಅವಧಿ ಮುಗಿಯುತ್ತಿದ್ದಂತೇ ಉಡುಪಿ ಅಷ್ಟಮಠದಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದೆ. ಹಿರಿಯ ಪೇಜಾವರ ಶ್ರೀಗಳ ಆಪ್ತರ ವಿರುದ್ದ ಶಿರೂರು ಮಠಾಧೀಶರು ತೊಡೆತಟ್ಟಿದ್ದಾರೆ. ಏಕಾದಶಿ ವೃಥಾಚಾರಣೆ, ಕೃಷ್ಣಜನ್ಮಾಷ್ಠಮಿ ಆಚರಣೆ ಮುಂತಾದ ವಿಚಾರಗಳಲ್ಲಿ ಅಷ್ಟಮಠಗಳಲ್ಲಿನ ಬಿರುಕಿಗೆ ದಶಕಗಳ ಇತಿಹಾಸವಿದೆ. ಪೇಜಾವರ, ಪಲಿಮಾರು, ಪುತ್ತಿಗೆ ಮತ್ತು ಅದಮಾರು ಮಠ ಒಂದು ಕಡೆಯಾದರೆ, ಶಿರೂರು, ಕೃಷ್ಣಾಪುರ, ಕಾಣಿಯೂರು ಮತ್ತು ಪುತ್ತಿಗೆ ಮಠ ಇನ್ನೊಂದು ಕಡೆ.

ಆದರೆ, ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮಠಗಳು, ಪೇಜಾವರ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಕೃಷ್ಣನ ದೈನಂದಿನ ಪೂಜೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗವಹಿಸುತ್ತಿದ್ದರು. ಆದರೆ, ಈಗ ಜಾಗಕ್ಕೆ ಸಂಬಂಧಪಟ್ಟಂತಹ ವ್ಯಾಜ್ಯದಿಂದಾಗಿ, ಶಿರೂರು ಶ್ರೀಗಳೀಗ ಪೇಜಾವರ ಶ್ರೀಗಳ ಆಪ್ತರ ವಿರುದ್ದ ಬೀದಿಗಿಳಿದಿದ್ದಾರೆ.ಸದ್ಯ, ಉಡುಪಿ ಹೊರವಲಯದಲ್ಲಿರುವ ಪೇಜಾವರ ಶ್ರೀಗಳು ಭಾನುವಾರ (ಜ 21) ನಗರಕ್ಕೆ ಆಗಮಿಸಲಿದ್ದು, ಶ್ರೀಗಳ ಜೊತೆ ಸವಿಸ್ತಾರವಾಗಿ ಮಾತನಾಡುವುದಾಗಿ ಶಿರೂರು ಶ್ರೀಗಳು ಹೇಳಿದ್ದಾರೆ.
Controversy between pejavar and shiroor mutt is well known to the localities and is going on for decades now . Recently the crisis got bigger and shops were demolished

Category

🗞
News

Recommended