• 8 years ago
ಇವಾಂಕಾ ಟ್ರಂಪ್ ಯಾರು? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಅಂತ ಒಂದೇ ವಾಕ್ಯದಲ್ಲಿ ಹೇಳಿಮುಗಿಸಿದರೆ ಸಾಕಾ..? ಖಂಡಿತ ಇಲ್ಲ, ಈ ಚೆಂದುಳ್ಳಿ ಚೆಲುವೆ ಮೂರು ಮಕ್ಕಳ ತಾಯಿ ಅಂದ್ರೆ ಹಲವರು ನಂಬಲಿಕ್ಕಿಲ್ಲ!ಅಮೆರಿಕದ ಟೆಲಿವಿಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಇವಾಂಕಾ ಫ್ಯಾಶನ್ ಡಿಸೈನರ್ ಆಗಿಯೂ ಪ್ರಸಿದ್ಧಿ ಪಡೆದವರು. ಪ್ರಸ್ತುತ ಭಾರತದ ಪ್ರವಾಸದಲ್ಲಿರುವ ಇವಾಂಕಾ ಹೈದರಾಬಾದಿಗೆ ಕಾಲಿಟ್ಟು, ಮುತ್ತಿನ ನಗರಿಯ ಮತ್ತೇರಿಸಿದ್ದಾರೆ. ಹೈದರಾಬಾದಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜಾಗತಿಕ ಉದ್ಯಮಶೀಲತೆ ಶೃಂಗಸಭೆ (ಜಿಇಎಸ್) ಗೆ ಆಗಮಿಸಿರುವ ಅವರ ಸಂಕ್ಷಿಪ್ತ ವ್ಯಕ್ತಿ ಪರಿಚಯ ಇಲ್ಲಿದೆ.ಒಂದಷ್ಟು ಗ್ಲಾಮರ್, ಸಾಕಷ್ಟು ಬುದ್ಧಿಮತ್ತೆ, ವ್ಯವಹಾರ ಕೌಶಲ್ಯ, ಸೌಂದರ್ಯ, ಪ್ರಖ್ಯಾತಿ ಎಲ್ಲವುಗಳ ಮಿಶ್ರಣ ಇವಾಂಕಾ ಟ್ರಂಪ್. ತಂದೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗುವಲ್ಲಿ ಇವಾಂಕಾರ ಅವಿರತ ಪ್ರಚಾರ, ಶ್ರಮವನ್ನು ಅಲ್ಲಗಳೆಯುವಂತಿಲ್ಲ.
Here is a brief profile of Ivanka Trump, who is a daughter of America President Donald Trump, an currently an advisor for America president..watch this video

Category

🗞
News

Recommended