ಇತ್ತೀಚೆಗೆ ಮನುಕುಲವನ್ನು ಕಾಡುತ್ತಿರುವ ಭೀಕರ ಕಾಯಿಲೆಗಳಲ್ಲಿ ಏಡ್ಸ್ ಕೂಡಾ ಒಂದು. ಎಚ್‌ಐವಿ ವೈರಸ್‌ನಿಂದ ಬರುವ ಈ ಕಾಯಿಲೆ, ಮನುಷ್ಯರನ್ನು ಇನ್ನಿಲ್ಲದಂತೆ ಕಾಡುತ್ತದೆ. ರಕ್ತ ಪೂರೈಕೆಯಿಂದ ತೊಡಗಿ ಅನೈತಿಕ ಲೈಂಗಿಕ ಸಂಬಂಧಗಳು ಈ ಕಾಯಿಲೆ ಬರಲು ಮುಖ್ಯ ಕಾರಣಗಳಾಗಿವೆ. ಮುಖ್ಯವಾಗಿ ಇದು ಜನರ ಜೀವನಶೈಲಿಯಿಂದ ಬರುವ ಕಾಯಿಲೆಯಾಗಿದೆ.ವಿಪರ್ಯಾಸವೆಂದರೆ ಈ ರೋಗಕ್ಕೆ ಇಂದಿನವರೆಗೂ ಔಷಧ ಕಂಡು ಹಿಡಿಯಲಾಗಲಿಲ್ಲ. ಕೆಲವು ಔಷಧಗಳ ಮೂಲಕ ಈ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದೇ ಹೊರತು ಈ ರೋಗದ ಸಂಪೂರ್ಣ ನಿವಾರಣೆ ಸಾಧ್ಯವಿಲ್ಲ.1988 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಈ ದಿನವನ್ನು ಆಚರಿಸಲು ಕರೆ ಕೊಟ್ಟಿದೆ. ಪ್ರತಿವರ್ಷ ಏಡ್ಸ್‌ನಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಇಂಥದ್ದೊಂದು ದಿನಾಚರಣೆಯ ಅಗತ್ಯ ಎಲ್ಲರಿಗೂ ಇದೆ.ಮುಖ್ಯವಾಗಿ ಆರೋಗ್ಯಕರ ಲೈಂಗಿಕ ಜೀವನವನ್ನು ರೂಢಿಸಿಕೊಂಡರೆ ಈ ಕಾಯಿಲೆಯಿಂದ ದೂರವಿರಬಹುದು.
December 1st is said to be world AIDS day . And a need for awareness regarding the issue is a must.
December 1st is said to be world AIDS day . And a need for awareness regarding the issue is a must.
Category
🗞
News