• 8 years ago
ಮೈಸೂರು, ನವೆಂಬರ್ 21: ಮೈಸೂರಿನ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಸಮೀಪದ ಅಂಕನಹಳ್ಳಿ ಕೆರೆಯಲ್ಲಿ ಸಿಕ್ಕ ಅಪರಿಚಿತ ಶವಗಳು ಯಾರದ್ದು ಎಂಬ ಪ್ರಶ್ನೆ ಇದೀಗ ಪೊಲೀಸರು ಸೇರಿದಂತೆ ಗ್ರಾಮಸ್ಥರನ್ನು ಕಾಡತೊಡಗಿದೆ. ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದ ಮಹಿಳೆಯ ಶವದ,ಸಾಲಿಗ್ರಾಮ ಸಮೀಪದ ಲಕ್ಷ್ಮೀಪುರ ಗ್ರಾಮದ ಮಹೇಶ್ ಅವರ ಪತ್ನಿ ಪುಟ್ಟಗೌರಮ್ಮ (26) ಎಂಬಾಕೆ ನ.17ರಂದು ಬಟ್ಟೆತೊಳೆಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದರು. ಈ ಬಗ್ಗೆ ಪತಿ ಮಹೇಶ್ ನೀಡಿದ ದೂರಿನ ಮೇರೆಗೆ ಶವವನ್ನು ಕೆರೆಯಿಂದ ಹೊರ ತೆಗೆಯುವ ಸಲುವಾಗಿ ಸಾಲಿಗ್ರಾಮ ಪೊಲೀಸ್ ಠಾಣೆಯ ಎ.ಎಸ್.ಐ ತಿಮ್ಮನಾಯಕ ಹಾಗೂ ಸಿಬ್ಬಂದಿ ಮೀನುಗಾರರ ಸಹಾಯಪಡೆದು ಶೋಧಕಾರ್ಯ ನಡೆಸಿದ್ದರು.ಚಾಮರಾಜ ಎಡದಂಡೆ ನಾಲೆಯ ಬಳಿ ಸ್ಥಳ ಪರಿಶೀಲಿಸಿದರೂ ಶವ ಪತ್ತೆಯಾಗಿರಲಿಲ್ಲ, ಶುಕ್ರವಾರದಿಂದ ನಾಲೆಯಲ್ಲಿ ಹುಡುಕಾಟ ನಡೆಸಿ ಕೊನೆಗೆ ಅಂಕನಹಳ್ಳಿ ಗ್ರಾಮದಲ್ಲಿ ಚಾಮರಾಜ ಎಡದಂಡೆ ನಾಲೆಗೆ ಹೊಂದಿ ಕೊಂಡಿರುವ ಕೆರೆಯಲ್ಲಿ ಪುಟ್ಟಗೌರಮ್ಮಳ ಶವ ಹುಡುಕುವಾಗ ಒಂದಿಷ್ಟು ದೂರದಲ್ಲಿ ಇಬ್ಬರು ಅಪರಿಚಿತ ಪುರುಷರ ಶವ ಪತ್ತೆಯಾಗಿದ್ದು, ಶವಗಳ ಗುರುತು ಪತ್ತೆ ಮಾಡಲಾಗದಷ್ಟು ದೇಹ ಕೊಳೆತು ವಿಕಾರವಾಗಿದೆ. ಇದರೊಂದಿಗೆ ಪುಟ್ಟಗೌರಮ್ಮಳ ಶವವೂ ದೊರೆತಿದೆ. ಇದೀಗ ಒಬ್ಬರ ಶವದೊಂದಿಗೆ ಇನ್ನಿಬ್ಬರು ಪುರುಷರ ಶವ ದೊರೆತಿದ್ದು ಅದು ಯಾರ ಶವ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

In a strange incident, police have searching for a dead body of a woman, who died after drown into a stream in a Mysuru, But at the time of searching they found 3 bodies instead of one! Police are investigating about other two anonymous bodies.,.watch this video

Category

🎵
Music

Recommended