• 5 years ago


ದೀಪಾವಳಿ ಹಬ್ಬದ ಸಡಗರ ಹಾಗೂ ಸಂಭ್ರಮಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ನರಕ ಚತುರ್ದಶಿಯಿಂದ ಆರಂಭವಾಗುವ ಈ ಹಬ್ಬವು ಗೋ ಪೂಜೆ, ಲಕ್ಷ್ಮಿಪೂಜೆ ಸೇರಿದಂತೆ ವಿಶೇಷ ಆಚರಣೆಗಳ ಮೂಲಕ ಹಬ್ಬದ ಸಡಗರವನ್ನು ಅನುಭವಿಸಲಾಗುವುದು. ಈ ವರ್ಷ 2019ರಲ್ಲಿ ದೀಪಾವಳಿ ಹಬ್ಬವು 25ರಿಂದ ಆರಂಭವಾಗಿ 29ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಅಕ್ಟೋಬರ್ 25ರಂದು ಧನತ್ರಯೋದಶಿಯ ಮೂಲಕ ದೀಪಾವಳಿಯ ಸಡಗರ ಸಂಭ್ರಮ ಎಲ್ಲರ ಮನೆಗಳಲ್ಲೂ ಮನೆಮಾಡುತ್ತದೆ. ದೀಪಾವಳಿಯ ಆರಂಭದ ದಿನದ ಅಂದರೆ ಧನತ್ರಯೋದಶಿ ಹಬ್ಬದಂದು ಕೆಲವು ವಸ್ತುಗಳನ್ನು ಖರೀದಿಸಿದರೆ ನಮ್ಮ ಸಂಪತ್ತು ಸಮೃದ್ಧವಾಗುವುದು ಎನ್ನಲಾಗುತ್ತದೆ. ಈ ವಿಷಯಗಳ ಬಗ್ಗೆ ಇನ್ನಷ್ಟು ತಿಳಿಯಬೇಕು ಅಥವಾ ಖರೀದಿಸಬೇಕಾದ ಸಾಂಪ್ರದಾಯಿಕ ವಸ್ತುಗಳು ಯಾವವು? ಶಾಸ್ತ್ರದ ಪ್ರಕಾರ ಕೆಲವು ಉಡುಗೊರೆಗಳನ್ನು ಸ್ವೀಕರಿಸುವುದು ಮತ್ತು ನೀಡುವುದು ಅಮಂಗಳಕರ ಎಂದು ಹೇಳಲಾಗುತ್ತದೆ. ಹಾಗಾದ್ರೆ ದೀಪಾವಳಿಯಲ್ಲಿ ಯಾವ ಉಡುಗೊರೆಗಳನ್ನು ನೀಡಬಾರದು ಮತ್ತು ಸ್ವೀಕರಿಸಬಾರದು ಎಂಬ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೆವೆ

Category

🗞
News

Recommended