ಕನ್ನಡಿ ಇಲ್ಲದೆ ಮೇಕಪ್ ಮಾಡಿಕೊಳ್ಳುವ ಮೇಕಪ್ ಟ್ರಿಕ್ಸ್ ಇದು! | Boldsky

  • 6 years ago
ಕನ್ನಡಿ ನೋಡದೇ ಮೇಕಪ್ ಮಾಡಿಕೊಳ್ಳ ಬಹುದೇ? ಅರೆ ಅರೆ ಎಲ್ಲಿಯಾದರೂ ಉಂಟೇ ಸಾಧ್ಯವೇ ಇಲ್ಲ ಎನ್ನುವ ಮಾತು ನಿಮ್ಮಿಂದ ಬರಬಹುದು! ಹೌದು, ಕನ್ನಡಿಯಿಲ್ಲದ ದಿನ ಊಹಿಸಲೂ ಅಸಾಧ್ಯ. ಅಂದ ಚೆಂದಕ್ಕೆ ಮತ್ತಷ್ಟು ಮೆರಗು ನೀಡುವಲ್ಲಿ ಕನ್ನಡಿ ಬಹು ಮುಖ್ಯ ಪಾತ್ರವಹಿಸುತ್ತದೆ ಅಲ್ಲವೇ? ಅದರಲ್ಲೂ ಮಹಿಳೆಯರಿಂಗತೂ ಕನ್ನಡಿಯಿಲ್ಲದ ದಿನ ಊಹಿಸಲೂ ಅಸಾಧ್ಯ. ದಿನನಿತ್ಯ ಆಫೀಸ್ ಗೆ ರೆಡಿಯಾಗುವ ಮುನ್ನ ಕನ್ನಡಿ ಮುಂದಷ್ಟು ಹೊತ್ತು ಸಮಯ ಕಳೆಯುವುದರಲ್ಲಿಯೇ ಬ್ಯೂಸಿ ಆಗಿಬಿಡುತ್ತಾರೆ... ತಾನು ತೊಟ್ಟ ಬಟ್ಟೆ ಚಂದವಾಗಿ ಕಾಣುತ್ತಿದೆಯೇ? ಕಿವಿಗೆ ಹಾಕಿಕೊಂಡ ರಿಂಗ್ ಬಟ್ಟೆಗೆ ಸೂಟ್ ಆಗುತ್ತಿದೆಯೇ? ಲಿಪ್ ಸ್ಟಿಕ್ ಸರಿಯಾಗಿದೆಯೆ? ಹೀಗೆ ತಮ್ಮ ಎಲ್ಲಾ ಸೌಂದರ್ಯವನ್ನು ಗ್ರಹಿಸಲು ಕನ್ನಡಿ ಮುಂದೆ ಸಮಯ ಕಳೆಯುತ್ತಾರೆ.. ಇನ್ನೂ ಹುಡುಗರೇನೂ ಕಡಿಮೆ ಇಲ್ಲ ಬಿಡಿ... ಬದಲಾಯಿಸುತ್ತಿರುವ ಹೇರ್ ಸ್ಟೈಲ್ ನಿಂದ ಹಿಡಿದು...ತಾನು ಹಾಕಿಕೊಂಡ ಶೂವರೆಗೂ ಸರಿಯಾಗಿ ಮ್ಯಾಚ್ ಆಗುತ್ತಿದೆಯೇ ಎಂದೆಲ್ಲಾ ಕನ್ನಡಿ ಮುಂದೆಯೇ ಕಳೆಯುತ್ತಾರೆ... ಅದು ಏನೇ ಇರಲಿ, ಆದರೆ ಕನ್ನಡಿ ಇಲ್ಲದೆ ಮೇಕಪ್ ಮಾಡಿಕೊಳ್ಳುವ ಮೇಕಪ್ ಟ್ರಿಕ್ಸ್ ಬಗ್ಗೆ ಕೇಳಿದ್ದೀರಾ? ಇಲ್ಲ ತಾನೇ ಇಲ್ಲಿದೆ ನೊಡಿ ಸರಳ ವಿಡಿಯೋ

Recommended