ಉತ್ತಮ ಪ್ರಜಾಕೀಯ ಪಕ್ಷದ ತಯಾರಿ ಬಗ್ಗೆ ಉಪ್ಪಿ ಹಂಚಿಕೊಂಡ ಇಂಚಿಂಚೂ ಮಾಹಿತಿ | Oneindia Kannada

  • 5 years ago
ಟ-ನಿರ್ದೇಶಕ, 'ಪ್ರಜಾಕಾರಣಿ' ಉಪೇಂದ್ರ ಅವರ ಲೋಕಸಭಾ ಚುನಾವಣೆ ತಯಾರಿ ಹೇಗಿದೆ ಎಂದು ತಿಳಿದುಕೊಳ್ಳುವುದು ಹಾಗೂ ಅದನ್ನು ಒನ್ ಇಂಡಿಯಾ ಕನ್ನಡದ ಓದುಗರಿಗೆ ಮುಟ್ಟಿಸುವುದು ನಮ್ಮ ಉದ್ದೇಶವಾಗಿತ್ತು. ಆ ಕಾರಣಕ್ಕೆ ಅವರ ಸಂದರ್ಶನ ಮಾಡಿ, ಅದನ್ನು ನಿಮ್ಮ ಮುಂದೆ ತಂದಿದ್ದೇವೆ. ಅವರ ಜತೆ ಮಾತನಾಡಿಸುವ ಅಷ್ಟೂ ಸಮಯ ಘನವಾದ ಉದ್ದೇಶ ಉಪೇಂದ್ರಗೆ ಇರುವುದು ಗೊತ್ತಾಗುತ್ತದೆ.

ಶತಾಯಗತಾಯ ಜನರಿಗೆ ತಮ್ಮ ಕನಸು, ಉದ್ದೇಶವನ್ನು ದಾಟಿಸಲೇಬೇಕು ಎಂದು ಅವರು ನಿರ್ಧರಿಸಿಯಾಗಿದೆ. ಅವರ ಬಳಿ ನೇರವಾಗಿ ಉತ್ತರ ಪಡೆಯುವುದು ಎಷ್ಟು ಕಷ್ಟವೋ ಪ್ರಶ್ನೆ ಕೇಳುವುದು ಮತ್ತೂ ಕಷ್ಟ. ಏಕೆಂದರೆ ನಾವೇ ಕೇಳಿದ ಪ್ರಶ್ನೆಗೆ ಮರುಪ್ರಶ್ನೆಯೊಂದನ್ನು ಇಟ್ಟು, ಸಂದರ್ಶನಕ್ಕೆ ಕೂತವರು ನಾವೋ ಅಥವಾ ಅವರೋ ಎಂಬ ಗೊಂದಲ ಉಂಟು ಮಾಡುವಂತೆ ಇರುತ್ತದೆ ಅವರ ವಾಗ್ಝರಿ.