• 6 years ago
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಅಕ್ಕ' ಧಾರಾವಾಹಿ ಮೂಲಕ ಗುರುತಿಸಿಕೊಂಡ ಕಿರುತೆರೆ ನಟಿ ಅನುಪಮಾ ಗೌಡ ಇದೀಗ ಕರುನಾಡ ಮನೆ ಮನಗಳಿಗೆ ಇನ್ನಷ್ಟು ಹತ್ತಿರ ಆಗಿ, ಜನಪ್ರಿಯತೆ ಗಳಿಸಿರುವುದು 'ಬಿಗ್ ಬಾಸ್' ಕಾರ್ಯಕ್ರಮದಿಂದ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊದಲ ವಾರವೇ ಕ್ಯಾಪ್ಟನ್ ಆಗಿ, ಎಲ್ಲ ಸ್ಪರ್ಧಿಗಳಿಗೂ ಪೈಪೋಟಿ ನೀಡುತ್ತಿರುವ ಪ್ರಬಲ ಸ್ಪರ್ಧಿ ಅನುಪಮಾ ಗೌಡ. ಆಟದಲ್ಲಿ ಚುರುಕಾಗಿರುವ ಅನುಪಮಾ ಗೌಡ, ಇದೇ 'ಬಿಗ್ ಬಾಸ್' ಮನೆಯಲ್ಲಿ ತಮ್ಮ ಲವ್ ಹಾಗೂ ಬ್ರೇಕಪ್ ಕಹಾನಿಯನ್ನ ಬಹಿರಂಗಗೊಳಿಸಿ, ಕಣ್ಣೀರು ಸುರಿಸಿದ್ದರು.ಈಗ ಮತ್ತೊಂದು ರಹಸ್ಯವನ್ನ ನಟಿ ಅನುಪಮಾ ಗೌಡ ಬಯಲು ಮಾಡಿದ್ದಾರೆ. ಒಂದುವರೆ ವರ್ಷದ ಹಿಂದೆ ನಟಿ ಅನುಪಮಾ ಗೌಡ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಆ ಘಟನೆಯನ್ನ 'ಬಿಗ್ ಬಾಸ್' ಕ್ಯಾಮರಾ ಮೂಲಕ ಇಡೀ ಕರ್ನಾಟಕದ ಜನತೆ ಮುಂದೆ ಹೇಳಿಕೊಂಡಿದ್ದಾರೆ ಅನುಪಮಾ ಗೌಡ. ಇನ್ನು ಇದೀಗ ಅನುಪಮಾ ಗೌಡ ಮತ್ತೊಂದು ವಿಷ್ಯ ಹೇಳಿದ್ದು ಇನ್ನು ಮದುವೆಯಾಗಲ್ಲ ಎಂದು ಹೇಳಿದ್ದಾರೆ.

Category

🗞
News

Recommended