• 6 years ago
ಮಕರ ಸಂಕ್ರಾಂತಿಯಂದು ಉತ್ತರಾಯಣ ಪುಣ್ಯಕಾಲ ಆರಂಭವಾಗುವುದರೊಂದಿಗೆ 'ಸಂಥಿಂಗ್ ವಿತ್
ಶಾಮ್' ವಿಡಿಯೋ ಅಂಕಣವೂ ಸೂರ್ಯ ದೇವನಿಗೆ ಹಲೋ ಹೇಳಿದೆ. ಸೂರ್ಯನಿಲ್ಲದೆ ನಾವಿಲ್ಲ,
ನೀವಿಲ್ಲ, ಈ ಭೂಮಿಯ ಮೇಲೆ ಜೀವನವೇ ಇಲ್ಲ. ಸೂರ್ಯನು ಜಾತ್ಯಾತೀತನೂ, ಧರ್ಮಾತೀತನೂ, ಸಕಲ
ಜೀವರಾಶಿಗಳ ಚೈತನ್ಯಶಕ್ತಿಯಾಗಿರುವನು.

ಹೇವಿಳಂಬಿನಾಮ ಸಂವತ್ಸರ, ಪುಷ್ಯ ಮಾಸ, ಕೃಷ್ಣ ಪಕ್ಷ, ಚತುರ್ದಶಿ, ಸೋಮವಾರ 15ನೇ ಜನವರಿ,
2018ರಂದು ಉತ್ತರಾಯಣ ಪುಣ್ಯಕಾಲ ಆರಂಭ. ಇದೇ ಮಕರ ಸಂಕ್ರಾಂತಿ, ಇದೇ ಹುಗ್ಗಿ ಹಬ್ಬ, ಇದೇ
ಸುಗ್ಗಿ ಹಬ್ಬ, ರೈತರಿಗೆ ಮತ್ತು ಅವರ ಫಲಾನುಭವಿಗಳಿಗೆ.

ಉತ್ತರಾಯಣ ಪುಣ್ಯಕಾಲ ಆರಂಭವಾಗುವುದರೊಂದಿಗೆ ಎಲ್ಲ ಶುಭಕಾರ್ಯಗಳಿಗೆ ನಾಂದಿ. ಮದುವೆ,
ಉಪನಯನ, ಗೃಹಪ್ರವೇಶ, ನಾಮಕರಣ ಮುಂತಾದ ಎಲ್ಲ ಶುಭಕಾರ್ಯಗಳಿಗೆ ಹಸಿರು ನಿಶಾನೆ ತೋರುವುದು
ಈ ಹಬ್ಬದ ಸಂಕೇತ. ಒನ್ಇಂಡಿಯಾ ಕನ್ನಡ ಮತ್ತು ಎಸ್ಕೆ ಶಾಮ ಸುಂದರ ವತಿಯಿಂದ ಸಂಥಿಂಗ್
ವಿತ್ ಶಾಮ್ ಮೂಲಕ ಎಲ್ಲ ಓದುಗರಿಗೆ ಸಂಕ್ರಾಂತಿ ಶುಭಾಶಯ ಮತ್ತು ನಮಸ್ಕಾರ.

Category

🗞
News

Recommended