• 5 years ago
ಹೂವೊಂದು ಬೇಕು ಬಳ್ಳಿ,ಗೆ, ಮಗುವೊಂದು ಬೇಕು ಹೆಣ್ಣಿಗೆ..... ಇದು ಹಳೆಯ ಕನ್ನಡ ಚಲನಚಿತ್ರದ ಹಾಡಿನ ಸಾಲುಗಳು. ಹಾಡು ಹಳೆಯದಾದರೇನು, ಇದರ ಭಾವ ಮಾತ್ರ ಎಂದಿಗೂ ಸತ್ಯ. ತನ್ನದೇ ಆದ ಮಗುವೊಂದನ್ನು ಪಡೆಯುವುದು ಪ್ರತಿ ಹೆಣ್ಣಿನ ಆಶಯವಾಗಿರುತ್ತದೆ. ಆದರೆ ಯಾವ ವಯಸ್ಸಿನಲ್ಲಿ ಮಗುವನ್ನು ಪಡೆಯುವುದು ಎಂಬುದನ್ನು ಮಾತ್ರ ಆಕೆ ಕೆಲವಾರು ಅಂಶಗಳನ್ನು ಆಧರಿಸಿ ನಿರ್ಧರಿಸಬೇಕಾಗುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ ಈ ನಿರ್ಧಾರ ದಂಪತಿಗಳು ಯಾವಾಗ ತಮ್ಮ ಸಂಸಾರವನ್ನು ಸ್ವಂತವಾಗಿ ಹೂಡಲು ಸಾಧ್ಯವೋ ಆಗಲೇ ಕೈಗೊಳ್ಳುತ್ತಾರೆ. ಉಳಿದಂತೆ ಮನೆಯ ಹಿರಿಯ ಸದಸ್ಯರ ಆಶಯವೂ ಈ ನಿರ್ಧಾರಕ್ಕೆ ಕಾರಣವಾಗಬಲ್ಲುದು. ಕಾರಣವೇನೇ ಇರಲಿ, ಒಮ್ಮೆ, ದಂಪತಿಗಳು ತಂದೆ ತಾಯಿಯಾಗ ಬಯಸಿದಾಗ ಇದಕ್ಕೆ ಅಗತ್ಯವಾದ ಮಾಹಿತಿಗಳ ಮಹಾಪೂರವೇ ಹರಿದುಬರುತ್ತದೆ. ವಿಶೇಷವಾಗಿ ಮಹಿಳೆಗೆ ಫಲವತ್ತತೆಯ ದಿನದಿಂದ ತೊಡಗಿ ಯಾವ ಆಹಾರಗಳನ್ನು ಸೇವಿಸಬೇಕು, ಸೇವಿಸಬಾರದು ಎಂಬೆಲ್ಲಾ ಮಾಹಿತಿಗಳು ದೊರಕುತ್ತವೆ. ಆದರೆ ಈ ಮಾಹಿತಿಗಳಲ್ಲಿ ಹೆಚ್ಚಿನವುಗಳನ್ನು ನಂಬುವಂತಿಲ್ಲ. ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತ್ರವೇ ನಿಮ್ಮ ಆರೋಗ್ಯದ ಮಾಹಿತಿಗಳನ್ನು ಪರಿಗಣಿಸಿ ಸೂಕ್ತ ಸಲಹೆಯನ್ನು ನೀಡಬಲ್ಲರು. ಗರ್ಭ ಧರಿಸಲು ಹಲವಾರು ಸ್ಥಿತಿಗಳು ಇದಕ್ಕೆ ಪೂರಕವಾಗಿರಬೇಕು. ಆರೋಗ್ಯ, ಫಲವತ್ತತೆ, ಪುರುಷನ ವೀರ್ಯಾಣುಗಳ ಗುಣಮಟ್ಟ, ಇತರ ಅನಾರೋಗ್ಯ ಮೊದಲಾದ ಹತ್ತು ಹಲವು ಮಾಹಿತಿಗಳನ್ನು ವೈದ್ಯರು ಪರಿಗಣಿಸಬೇಕಾಗುತ್ತದೆ. ಆ ಪ್ರಕಾರ, ನೀವು ಸಹಾ ಇದಕ್ಕೆ ಸರಿಯಾದ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಎಷ್ಟೋ ಬಾರಿ, ದಂಪತಿಗಳಿಗೆ ಕೆಲವು ಮಾಹಿತಿಗಳಿರುವುದಿಲ್ಲ, ಇದರ ಅರಿವೇ ಇಲ್ಲದೇ ಇದನ್ನು ವೈದ್ಯರಲ್ಲಿ ಕೇಳಲೂ ಹೋಗುವುದಿಲ್ಲ. ಎಲ್ಲಿಯವರೆಗೆ ವೈದ್ಯರನ್ನು ನೀವು ಕೇಳುವುದಿಲ್ಲವೋ ವೈದ್ಯರಿಗೆ ನಿಮಗೆ ಈ ಮಾಹಿತಿ ಇದೆಯೋ ಇಲ್ಲವೋ ಎಂಬುದು ಗೊತ್ತಾವುದಾದರೂ ಹೇಗೆ? ಆದ್ದರಿಂದ, ಪ್ರತಿ ದಂಪತಿಗಳೂ ವೈದ್ಯರಲ್ಲಿ ಕೇಳಲೇಬೇಕಾದ ಎಳು ಪ್ರಮುಖ ಪ್ರಶ್ನೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ನೋಡೋಣ.

Recommended