ಸಿದ್ದರಾಮಯ್ಯನವರ ಕೃಷಿ ಭಾಗ್ಯ ಯೋಜನೆ ಕರ್ನಾಟಕ ರೈತರ ಪಾಲಿನ ಸೌಭಾಗ್ಯ | Oneindia Kannada

  • 6 years ago
ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯ ನಂತರ ಹೆಚ್ಚು ಜನಕ್ಕೆ ತಲುಪಿದ ಪರಿಣಾಮಕಾರಿ ಯೋಜನೆ ಎಂದರೆ ಕೃಷಿ ಭಾಗ್ಯ ಯೋಜನೆ.

ಕೃಷಿಭಾಗ್ಯ ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಫಲಪ್ರಧ, ಫಲದಾಯಕ ಯೋಜನೆ ಎನ್ನಲಾಗುತ್ತದೆ. ಈ ಯೋಜನೆ ರಾಜ್ಯದ ಕೃಷಿ ಪದ್ಧತಿಯನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಜೊತೆಗೆ, ಕೃಷಿಯನ್ನು ಲಾಭದಾಯಕ ಉದ್ದಿಮೆ ಮಾಡುವತ್ತ ಹೆಜ್ಜೆ ಇಟ್ಟಿದೆ.

ಕೃಷಿ ಅಧಿಕಾರಿಗಳೇ ಹೇಳುವ ಪ್ರಕಾರ ಕೃಷಿ ಭಾಗ್ಯ ಯೋಜನೆ ಚಟುವಟಿಕೆಗೆ ಆದ್ಯತೆ ನೀಡುವ ಯೋಜನೆ, ಕೇವಲ ಕೃಷಿಗೆ ಮಾತ್ರವೇ ಒತ್ತು ನೀಡದೆ, ಕೃಷಿಯ ಉಪ ಕಸುಬುಗಳಿಗೂ ಈ ಯೋಜನೆ ಉತ್ತೇಜನ ನೀಡುತ್ತಿದೆ. ಕೃಷಿ ಹೊಂಡ, ಬದು ನಿರ್ಮಾಣ ಮುಂತಾದ ಕಾರ್ಯಕ್ರಮಗಳ ಮೂಲಕ ದೂರಗಾಮಿ ಕೃಷಿಗೆ ಆದ್ಯತೆ ನೀಡುವ ಕಾರ್ಯ ಮಾಡಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳೆಯಾಶ್ರಿತ ಪ್ರದೇಶದ ರೈತರ ಕೃಷಿ ಜೀವನವನ್ನು ಉತ್ತಮ ಪಡಿಸಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
Karnataka government gave cores of grant to its important scheme 'Krishi Bhagya'. Krishi Bagya is a effective scheme many farmers in Karnataka made use of this scheme and doing productive agriculture.