• 8 years ago
Karnataka Rakshana Vedike, Jaya Karnataka, doctors' association, sandalwood and many Kannada organizations extend their support to during Mahadayi protest at BJP office Malleshwaram in Bengaluru.


ಮಹದಾಯಿ ಹೋರಾಟ ಕರ್ನಾಟಕ ಬಿಜೆಪಿ ಪಾಲಿಗೆ ಕಗ್ಗಂಟಾಗಿದೆ. ವಿವಾದ ಇತ್ಯರ್ಥ ಮಾಡುತ್ತೇನೆಂದು ಘೋಷಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಇದೀಗ ಪೇಚಿಗೆ ಸಿಲುಕಿದ್ದಾರೆ.ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಕಳೆದ ನಾಲ್ಕೈದು ದಿನಗಳಿಂದ ಮಹದಾಯಿ ಹೋರಾಟಗಾರರ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಸ್ಯಾಂಡಲ್ ವುಡ್, ವೈದ್ಯರ ಸಂಘ, ಹಲವು ಕನ್ನಡ ಪರ ಸಂಘಟನೆಗಳು ಈ ಹೋರಾಟಕ್ಕೆ ಸಾಥ್ ನೀಡುವುದಾಗಿ ಘೋಷಿಸಿವೆ. ಇದರಿಂದ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳವ ಎಲ್ಲಾ ಸಾಧ್ಯತೆಗಳಿವೆ.ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ನಡೆಯುತ್ತಿರುವ ಮಹದಾಯಿ ಹೋರಾಟದಲ್ಲಿ ಮಂಗಳವಾರ ಮಧ್ಯಾಹ್ನ ಹಲವು ಸ್ಯಾಂಡಲ್ ವುಡ್ ನಟ-ನಟಿಯರು ಭಾಗವಹಿಸಿಲಿದ್ದಾರೆ ಎಂದು ಫಿಲ್ಮ್ ಛೇಂಬರ್ ಅಧ್ಯಕ್ಷ ಸಾ.ರಾ.ಗೋಮಿಂದು ತಿಳಿಸಿದರು.ಮುಖ್ಯವಾಗಿ ನಟ ಯಶ್ ಅವರೂ ಸಹ ಮಹದಾಯಿ ಅಖಾಡಕ್ಕೆ ಇಳಿಯಲಿದ್ದು, ಹೋರಾಟಕ್ಕೆ ಮತ್ತಷ್ಟು ಬಲ ಬರಲಿದೆ. ಮತ್ತೊಂದೆಡೆ ಬಿಜೆಪಿ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ನಾಯಕ ಜತೆ ಮಾತುಕತೆಯಲ್ಲಿ ತೊಡಗಿದ್ದಾರೆ.

Category

🗞
News

Recommended