• 8 years ago
Vrunda Shekhar, who was a consultant of Karnataka Janapada Academy and a photographer is now involving her in a different work in which she is designing Kannada alphabets, Karnataka folk culture etc on Karnataka's traditional Saree.

ಸೀರೆಯ ಮೇಲೆ ಕನ್ನಡದ ರಂಗು ಚೆಲ್ಲಿದ ವೃಂದಾ ಶೇಖರ್. ನೀರೆಗೆ ಸೀರೆಗಿಂತ ಚೆಂದದ ಉಡುಪು ಬೇರೆಯಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವಲ್ಲೂ ಭಾರತೀಯ ಸನಾತನ ಸಂಸ್ಕೃತಿಯನ್ನು ಬಿಂಬಿಸುವ ಸೀರೆಗಳು ತಮ್ಮ ಜನಪ್ರಿಯತೆಯನ್ನು, ಮಹತ್ವವನ್ನು ಇಂದಿಗೂ ಉಳಿಸಿಕೊಂಡಿವೆ. ಯಾವುದಾದರೊಂದು ಅದ್ಧೂರಿ ಸಮಾರಂಭವೆಂದರೆ ಅದಕ್ಕೆ ಇಂದಿಗೂ ಸೀರೆಯೇ ಭೂಷಣ ಎಂಬ ನಂಬಿಕೆ ನಮ್ಮದು. ಕಾಲಕ್ಕೆ ತಕ್ಕಂತೆ ಸೀರೆಯ ಗುಣಮಟ್ಟದಲ್ಲಿ, ವಿನ್ಯಾಸದಲ್ಲಿ ಹಲವು ಬದಲಾವಣೆಯಾಗಿವೆ. ಪಾರಂಪರಿಕ ಉಡುಪು ಸೀರೆ, ಫ್ಯಾಷನ್ ಲೋಕಕ್ಕೂ ಅಷ್ಟೇ ಸಮಬಲದ ಸ್ಪರ್ಧೆ ನೀಡಿದೆ. ಇಂಥ ಸೀರೆಯ ಮೂಲಕ ಕನ್ನಡ ಭಾಷೆಯ ಸೊಗಡನ್ನು, ಕಂಪನ್ನು ಪಸರಿಸುವ ಕೆಲಸವಾದರೆ ಹೇಗಿರುತ್ತದೆ? ಒಂದೆಡೆ ನಮ್ಮ ಸಾಂಪ್ರದಾಯಿಕ ಉಡುಪಿಗೂ ಮನ್ನಣೆ, ಇನ್ನೊಂದೆಡೆ ನಮ್ಮ ಶ್ರೀಮಂತ ಭಾಷೆಗೂ ಗೌರವ! ಹೌದು, ಇದೇ ಉದ್ದೇಶ ಇಟ್ಟುಕೊಂಡು ಕರ್ನಾಟಕದ ಹೆಮ್ಮೆಯ ಇಳಕಲ್ ಸೀರೆಗಳ ಮೇಲೆ ಕನ್ನಡ ಅಕ್ಷರಗಳನ್ನೂ, ಕವನಗಳನ್ನೂ, ಜಾನಪದ ಕಲೆಗಳನ್ನು ಮೂಡಿಸುವ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿದೆ. ಈ ವಿಭಿನ್ನ ಕಾರ್ಯಕ್ಕೆ ಮುನ್ನುಡಿ ಬರೆದವರು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಕನ್ಸಲ್ಟಂಟ್ ವೃಂದಾ ಶೇಖರ್.

Category

🗞
News

Recommended