Skip to playerSkip to main contentSkip to footer
  • 1/5/2018
ಕೇಂದ್ರ ಸರಕಾರವೂ ತನ್ನ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳುವ ಸಲುವಾಗಿ ಆಧಾರ್ ಪಡೆಯುವುದನ್ನು ಕಡ್ಡಾಯ ಮಾಡುವುದರೊಂದಿಗೆ ಈಗಾಗಲೇ ಪಡೆದುಕೊಂಡಿರುವ ಸೇವೆಗಳಿಗೂ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮೊಬೈಲ್ ನಂಬರ್ ನೊಂದಿಗೆ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡುತ್ತಿದೆ. ಮೊಬೈಲ್ ಆಧಾರ್ ಲಿಂಕ್ ಮಾಡುವ ಸಲುವಾಗಿ ಈ ಮೊದಲು ಟೆಲಿಕಾಂ ಆಪರೇಟರ್ ಗಳ ಔಟ್ ಲೈಟ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದಕ್ಕೆ ಕಡಿವಾಣ ಹಾಕಿ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು, ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಮಾಡುವ ಅವಕಾಶವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಮೂಲಕವೇ ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ನೀವು ಎಲ್ಲಿಯೂ ಹೋಗಬೇಕಾದ ಅವಶ್ಯಕತೆ ಇಲ್ಲ. ಇದಕ್ಕಾಗಿ ನಿಮ್ಮ ಮೊಬೈಲ್ ನಿಂದ ಒಂದು ಕರೆಯನ್ನು ಮಾಡಬೇಕಾಗದೆ ಅಷ್ಟೆ. 14546 ಸಂಖ್ಯೆಗೆ ಕರೆ ಮಾಡಬೇಕಾಗಿದ್ದು, ಇದು ಉಚಿತ ಸೇವೆಯಾಗಿದೆ.

Category

🤖
Tech

Recommended