• 6 years ago
ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ಕೆಲಸಕ್ಕಾಗಿ ಬದಲಾಯಿಸುವುದು ಖಾಸಾಗಿ ಕಂಪೆನಿಗಳ ನೌಕರರ ಅದೃಷ್ಟವೋ ಅಥವಾ ದುರಾದೃಷ್ಟವೋ ಗೊತ್ತಿಲ್ಲಾ.! ಆದರೆ, ಉದ್ಯೋಗದ ದೆಸೆಯಿಂದ ಕಂಪನಿ ಬದಲಿಸಿದಾಗಲೆಲ್ಲ ಇಪಿಎಫ್ ಖಾತೆಗಳು ಮಾತ್ರ ಬದಲಾಗುತ್ತಲೇ ಹೋಗಿ ಕಿರಿಕಿರಿ ನೀಡುತ್ತವೆ.!! ಕೆಲವು ಉದ್ಯೋಗಿಗಳಂತೂ ಎರಡು-ಮೂರು ಖಾತೆಗಳಿಗಿಂತ ಹೆಚ್ಚು ಇಪಿಎಫ್ ಖಾತೆಗಳನ್ನು ಸಹ ಹೊಂದಿರುತ್ತಾರೆ. ಹಾಗಾಗಿ, ಇಂತವರಿಗೆ ಅನುಕೂಲವಾಗುವಂತೆ ಸರ್ಕಾರ ಎಲ್ಲ ಇಪಿಎಫ್ ಖಾತೆಗಳನ್ನೂ ವಿಲೀನಗೊಳಿಸುವ ಸೌಲಭ್ಯವನ್ನು ನೀಡಿದೆ.! ಹಾಗಾದರೆ, ಆನ್‌ಲೈನ್‌ ಮೂಲಕ ಸುಲಭವಾಗಿ ನಾನಾ ಇಪಿಎಫ್ ಖಾತೆಗಳನ್ನು ಹೇಗೆ ವಿಲೀನ ಮಾಡಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!ಖಾತೆಗಳ ವಿಲೀನಗೊಳಿಸುವ ಸೇವೆ ಪಡೆಯಲು ಯಾವುದೇ ಇಪಿಎಫ್ ಸದಸ್ಯನು ತನ್ನ ಕೈವೈಸಿ ಮತ್ತು ಆಧಾರ್‌ ವಿವರಗಳನ್ನು ಅಪ್‌ಡೇಟ್‌ ಮಾಡಿರಬೇಕು. ಅಲ್ಲದೇ ಇಪಿಎಫ್‌ಒಗೆ ನೋಂದಣಿ ಮಾಡಿಕೊಂಡಿರಬೇಕು.ಈ ಕಾರ್ಯವಾಗಿದ್ದರೆ, ಯುಎಎನ್‌ ಸಕ್ರಿಯಗೊಂಡ 3 ದಿನಗಳ ಬಳಿಕ ಪಿಎಫ್‌ ಖಾತೆಗಳ ವಿಲೀನ ಮಾಡಲು ಸಾಧ್ಯ.

Category

🤖
Tech

Recommended