• 7 years ago
Does demonetization affect Indian economy? Question is very relevant during the first anniversary of Demonetization(Nov 8th). Twitters have already started debate on demonetization. #DeMoDisaster and #DemoWins hashtags are trending now.


ಅಪನಗದೀಕರಣದ ಆಘಾತಕ್ಕೆ ಮೊದಲ ವಾರ್ಷಿಕೋತ್ಸವ: ಗೆಲುವೋ, ಸೋಲೋ?! ಹುಟ್ಟಿದ ದಿನ, ಮದುವೆ ವಾರ್ಷಿಕೋತ್ಸವ, ಪುಣ್ಯತಿಥಿಗಳು ನೆನಪಿರುತ್ತೋ ಬಿಡುತ್ತೋ, ಆದರೆ "ನವೆಂಬರ್ 08" ರ ದಿನ ಮಾತ್ರ ಹಲವರಿಗೆ ಇಂದೂ ನಿದ್ದೆ ಕೆಡಿಸುವ ಮಟ್ಟಿಗೆ ನೆನಪಿನಲ್ಲಿದೆ. ಮೈಕ್ ಮುಂದೆ ಪ್ರಧಾನಿ ನರೇಂದ್ರ ಮೋದಿ ಬಂದು ನಿಂತರೆ ಸಾಕು, 'ಅಯ್ಯೋ ದೇವರೆ ಇನ್ನೇನು ಕಾದಿದೆಯೋ' ಎಂದು ನೆನೆಪಿಗೆ ಬಂದ ದೇವರನ್ನೆಲ್ಲ ಸ್ತುತಿಸುವ ಮಟ್ಟಿಗೆ ಭಾರತೀಯರ ಮನಸ್ಸಿನಲ್ಲಿನ್ನೂ ಅಪನಗದಿಕರಣದ ಆಘಾತ ಅಚ್ಚೊತ್ತಿದೆ.ನವೆಂಬರ್ 8 ರಂದು ಅಪನಗದೀಕರಣ ತನ್ನ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹೊತ್ತಲ್ಲಿ, ಅದರ ಸಾಧಕ-ಬಾಧಕಗಳ ಚರ್ಚೆ ಸಂದರ್ಭೋಚಿತ. ವಿಪಕ್ಷಗಳೆಲ್ಲ ನವೆಂಬರ್ 8 ನ್ನು 'ಕರಾಳ ದಿನ'ವೆಂದು ಆಚರಿಸಲು ಹೊರಟಿದ್ದರೆ, ಭಾರತೀಯ ಅರ್ಥ ವ್ಯವಸ್ಥೆಯ ಮೇಲೆ ಅಪನಗದೀಕರಣದಿಂದಾದ ಧನಾತ್ಮಕ ಪರಿಣಾಮ, ಫಲಗಳ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುತ್ತಿದೆ.

Category

🗞
News

Recommended