• 5 years ago
What is the connection between Dandi March and RSS : Congress social media head, former actress, ex MP Ramya alias Divya Spandana tweets. She says RSS did not participate in Dandi March, because there were scared of Dandi. What does she mean by Dandi?

ದಾಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ, ಭಾರತದ ಸ್ವಾತಂತ್ರ್ಯ ಸಮರಕ್ಕೆ ಅತ್ಯಂತ ಮಹತ್ವದ ತಿರುವು ನೀಡಿದಂಥ ಶಾಂತಿಯುತ ಹೋರಾಟ. ಸರಿಯಾಗಿ 1930ರ ಮಾರ್ಚ್ 12ರಂದು ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ್ದ ಕರವನ್ನು ವಿರೋಧಿಸಿ ಸತ್ಯಾಗ್ರಹ ಚಳವಳಿ ಆರಂಭಿಸಿದ್ದರು. ಕಾಂಗ್ರೆಸ್ಸಿನ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ , ಮಾಜಿ ಚಿತ್ರನಟಿ, ಮಾಜಿ ಸಂಸದೆ (ಮಂಡ್ಯ) ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಅವರು, ದಂಡಿ ಸತ್ಯಾಗ್ರಹಕ್ಕೂ, ಅವರು ಸಿಕ್ಕಾಪಟ್ಟೆ ದ್ವೇಷಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನೂ ಬೆಸೆದು ಮಾಡಿರುವ ಟ್ವೀಟ್ ಟ್ವಿಟ್ಟರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರಲ್ಲಿನ 'ಹಾಸ್ಯ ಪ್ರಜ್ಞೆ'ಗೆ ಆ ಟ್ವೀಟ್ ಕನ್ನಡಿ ಹಿಡಿದಂತಿದೆ.

Category

🗞
News

Recommended