• 7 years ago
ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ. ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಟ ಕಾಶಿನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ. ಕಳೆದ ಎರಡು ದಿನಗಳಿಂದ ಕಾಶಿನಾಥ್ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ವಿಧಿವಶವಾಗಿದ್ದಾರೆ..

ಕಳೆದ ವರ್ಷ ಕಾಶಿನಾಥ್ ಚೌಕಾ ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ಸಮಯದಲ್ಲೇ ಕಾಶಿನಾಥ್ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಕಾಶಿನಾಥ್ ಅವರಿಗೆ ಇಬ್ಬರು ಮಕ್ಕಳಿದ್ದು ಮಗ ಅಭಿಮನ್ಯು ಸಿನಿಮಾರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದರು. ಅನೇಕ ದಿನಗಳಿಂದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದರು ಕಾಶಿನಾಥ್.

'ಚೌಕ' ಸಿನಿಮಾದ ಬಿಡುಗಡೆ ಸಮಯದಲ್ಲೇ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶಿನಾಥ್ ಚಾಮಾರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಿನಿಮಾ ನಿರ್ದೇಶನ ಮಾಡುವುದರ ಜೊತೆಗೆ ನಟನೆಯನ್ನೂ ಮಾಡುತ್ತಾ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದರು ನಟ ಕಾಶಿನಾಥ್.

ಕಾಶಿನಾಥ್ ಅಗಲಿಕೆ ಕನ್ನಡ ಸಿನಿಮಾರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಸದ್ಯ ಚಿತ್ರರಂಗದ ಗಣ್ಯರು ಶಂಕರ ಆಸ್ಪತ್ರೆಯ ಬಳಿ ಆಗಮಿಸುತ್ತಿದ್ದು ಆಸ್ಪತ್ರೆಯ ಅಧಿಕಾರಿಗಳಿದ ಅಧಿಕೃತವಾಗಿ ಸುದ್ದಿ ಅನೌನ್ಸ್ ಮಾಡಬೇಕಾಗಿದೆ.

ಕಾಶೀನಾಥ್ ಅಗಲಿಕೆಗೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇದೀಗ ಉಪೇಂದ್ರ ಹಾಗು ಗುರುಕಿರಣ್ ಕೂಡ ಕಾಶೀನಾಥ್ ರಿಗೆ ಸಂತಾಪ ಸೂಚಿಸಿದ್ದಾರೆ. ಉಪೇಂದ್ರರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸದ ಕಾಶೀನಾಥ್ ರ ಅಗಲಿಕೆಗೆ ಉಪೇಂದ್ರ ಕಣ್ಣೀರಿಟ್ಟಿದ್ದಾರೆ. ಇನ್ನು ತಮ್ಮ ಗುರುಗಳ ಬಗ್ಗೆ ಉಪೇಂದ್ರ ಏನ್ ಹೇಳ್ತಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ
Actor Director Kashinath passes away today. Kashinath was suffering from cancer & had got admitted to the hospital from past 2 days. Sandalwood celebrities expresses their condolences to the Veteran Actor Kashinath. Now Upendra, who is introduced to the Kannada Film Industry by Kashinath & who was treating Kashinath as his Guru, expresses his condolences towards the Demise of Kashinath. Music Composer Gurukiran was also present.

Recommended