Skip to playerSkip to main contentSkip to footer
  • 1/22/2018
Actor Jaggesh supports actress Sruthi Hariharan statement about sexual harassment in the film industry. Actress Meghna Raj and Sanjana also tweeted about this.


ಕಳೆದ ಎರಡು ದಿನಗಳಿಂದ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ (ಕಾಸ್ಟಿಂಗ್ ಕೌಚ್)ಸಿನಿಮಾರಂಗದಲ್ಲಿ ಆಗುವ ಲೈಂಗಿಕ ಕಿರುಕುಳದ ಬಗ್ಗೆ ನಟಿ ಶೃತಿ ಮನಸ್ಸು ಬಿಚ್ಚಿ ಮಾತನಾಡಿದ್ದರು. ಚಿತ್ರರಂಗಕ್ಕೆ ಬರುವಾಗ ತಮಗಾದ ಅನುಭವವನ್ನ ಹೇಳಿಕೊಂಡಿರುವುದಕ್ಕೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕೇಳಿ ಬಂದಿದ್ದವು.

ಸಿನಿಮಾರಂಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಹೋರಾಟ ಮಾಡಲು ಕನ್ನಡ ಸಿನಿಮಾರಂಗ ಒಂದಾಗ ಬೇಕಿದೆ. ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಹೋರಾಟ ಮಾಡಬೇಕೆಂದು ಮನವಿ ಮಾಡಿದ್ದ ಶೃತಿ ಹರಿಹರನ್ ಜೊತೆಗೆ ಚಿತ್ರರಂಗದ ಅನೇಕರು ಕೈ ಜೋಡಿಸಿದ್ದಾರೆ.

ಕನ್ನಡ ಸಿನಿಮಾರಂಗದ ಅನೇಕರು ಶೃತಿಯ ಮಾತಿಗೆ ಬೆಲೆ ನೀಡಿ ನಿಮ್ಮ ಪರವಾಗಿ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಹಾಗಾದ್ರೆ ಈ ಬಗ್ಗೆ ಮಾತನಾಡಿರುವ ಕಲಾವಿದರು ಯಾರು? ಯಾವ ನಾಯಕಿಯರು ಶೃತಿ ಮಾತಿಗೆ ಮರು ಧ್ವನಿ ಆಗಿದ್ದಾರೆ

Category

🗞
News

Recommended