• 8 years ago
Shortage of Brahmin brides is one of the biggest issues: Two NGOs from Mysuru and Varanasi have come with up inter city solution to resolve this matchmaking crisis. Brahmin families in the city have been struggling to find the right match for eligible grooms, especially for those who are into traditional occupations like priesthood, cooking, farming etc.

ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್! ಅವಳು ಕಪ್ಪು..ಇವಳು ಉದ್ದ ಜಾಸ್ತಿ, ಉಪ್ಪಿಟ್ಟು ಸರಿಯಿಲ್ಲ ಹೀಗೆ ಏನೇನೋ ಕಾರಣಗಳನ್ನು ನೀಡಿ, ಬಂದ ಸಂಬಂಧಗಳನ್ನೆಲ್ಲಾ ರಿಜೆಕ್ಟ್ ಮಾಡುತ್ತಿದ್ದ ಗಂಡಿನ ಕಡೆಯವರಿಗೆ, ಈಗ ಹೆಣ್ಣು ಅನ್ನೋದು ಸಿಕ್ಕಿದರೆ ಸಾಕಪ್ಪಾ.. ಸಾಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಬರೀ ಬ್ರಾಹ್ಮಣ ಸಮುದಾಯಕ್ಕೆ ಸೀಮಿತವಲ್ಲ.ಹಾಗಂತ, ಎಲ್ಲಾ ಕುಟುಂಬದವರು ಕುಂಟನೆಪಯಿಟ್ಟುಕೊಂಡು ಬಂದ ಸಂಬಂಧವನ್ನೆಲ್ಲಾ ತಿರಸ್ಕರಿಸಿದ್ದಾರೆಂತ ಹೇಳುತ್ತಿಲ್ಲ. ಒಟ್ಟಿನಲ್ಲಿ, ಬ್ರಾಹ್ಮಣ ಸಮುದಾಯದಲ್ಲಿ ವಧು ಸಮಸ್ಯೆ ಎಷ್ಟು ಗಂಭೀರವಾಗಿ ಕೂತಿದೆಯೋ, ಅಷ್ಟೇ ಸಮಸ್ಯೆ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯದಲ್ಲೂ ಇದೆ. ವರದಕ್ಷಿಣೆ ವಿಚಾರ ಬಿಡಿ..ಮದುವೆ ಖರ್ಚು ನಾವೇ ನೋಡ್ಕೋತೀವಿ ಅಂದರೂ ಹೆಣ್ಣು ಸಿಗುತ್ತಿಲ್ಲ ಅನ್ನೋದು ಈಗಿನ ವಸ್ತುಸ್ಥಿತಿ. ಬೇರೆ ಜಾತಿಯ ವಧುವನ್ನು ಬ್ರಾಹ್ಮಣ ಹುಡುಗರು ಮದುವೆಯಾದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ, ಅದು ಮುಂದುವರಿಯುತ್ತಲೇ ಇದೆ..

Category

🗞
News

Recommended