ಉಡುಪಿಯ ಕೃಷ್ಣ ಕನಕರ ಭಕ್ತಿಗೆ ಪಶ್ಚಿಮಕ್ಕೆ ತಿರುಗಿದ್ದು ಹೌದೆ? ಕನಕ ದಾಸರ ಭಕ್ತಿಗೆ ಒಲಿದು ಉಡುಪಿಯಲ್ಲಿನ ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಸತ್ಯ ಎಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಉಡುಪಿಯಲ್ಲಿ ಸೋಮವಾರ ಕನಕ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅದೇ ವೇಳೆ ಈ ಮಾತನ್ನು ಪ್ರಗತಿಪರರೂ ಒಪ್ಪುವುದಿಲ್ಲ ಹಾಗೂ ಸನಾತನಿಗಳು ಸಹ ಮಾನ್ಯ ಮಾಡುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಕನಕದಾಸರ ಭಕ್ತಿಗೆ ಒಲಿದ ಕೃಷ್ಣ ಪೂರ್ವ ದಿಕ್ಕಿಗೆ ಮುಖ ಮಾಡಿದ್ದವನು ಪಶ್ಚಿಮಕ್ಕೆ ತಿರುಗಿದ ಎಂಬ ಬಗ್ಗೆಯೇ ಹಲವು ವಾದ- ಪ್ರತಿ ವಾದಗಳಿವೆ. ಉಡುಪಿಯ ಕೃಷ್ಣ ವಿಗ್ರಹ ಇದ್ದದ್ದೇ ಪಶ್ಚಿಮ ದಿಕ್ಕಿಗೆ. ಅದರಲ್ಲಿ ತಿರುಗುವ ಮಾತೇ ಇಲ್ಲ ಎಂದು ವಾದಿಸುವವರು ಕೂಡ ಇದ್ದಾರೆ. ಒಟ್ಟಾರೆ ಕೃಷ್ಣ ವಿಗ್ರಹ ಪಶ್ಚಿಮಕ್ಕೆ ತಿರುಗಿದ ವಿಚಾರವೇ ಚರ್ಚಾ ವಸ್ತು.ಹೀಗಿರುವಾಗ ಸೋಮವಾರ ಪೇಜಾವರ ಶ್ರೀಗಳು ನೀಡಿದ ಹೇಳಿಕೆ ಮತ್ತೆ ಚರ್ಚೆಗೆ ಕಾರಣವಾಗಿದೆ.
Was Udupi Krishna idol really turned west to Kanaka Dasa devotion? This question again raised after Pejawar Seer said, it was a true incident and people must accept the the truth. Here is analysis about the statement of Pejawar Seer.

Category
🗞
News