• 8 years ago
Questions and debate in and around in Udupi about whether Udupi Paryaya Pejawar Seer has crossed the rules and regulations of Krishna Mutt by attending the 'Dharma Sansad - 2017'.

ಧರ್ಮ ಸಂಸತ್ತಿನಲ್ಲಿ ಅಷ್ಟಮಠದ ನಿಯಮಕ್ಕೆ ಪೇಜಾವರರಿಂದ ಅಪಚಾರ? ವಿಶ್ವ ಹಿಂದೂ ಪರಿಷದ್ ಆಯೋಜಿಸಿರುವ 'ಧರ್ಮ ಸಂಸದ್ ಉಡುಪಿ - 2017'ರಲ್ಲಿ ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಪೀಠಾಧಿಪತಿ ಪೇಜಾವರ ವಿಶ್ವೇಶ್ವರತೀರ್ಥ ಶ್ರೀಗಳಿಂದ, ಆಚಾರ್ಯ ಮಧ್ವರು ಹಾಕಿಕೊಟ್ಟಿದ್ದ ಅಷ್ಟಮಠದ ನಿಯಮಗಳಿಗೆ ಅಪಚಾರವಾಗಿದೆಯೆ? ಈ ಬಗ್ಗೆ ಉಡುಪಿಯಲ್ಲಿ ಪೇಜಾವರ ಶ್ರೀಗಳ ಪರ ಮತ್ತು ವಿರೋಧ ಚರ್ಚೆಗಳು ಚಾಲ್ತಿಯಲ್ಲಿದೆ. ಕನಕದಾಸನ ಭಕ್ತಿಗೊಲಿದು ಶ್ರೀಕೃಷ್ಣ ಪಶ್ಚಿಮಕ್ಕೆ ತಿರುಗಿದ, ಈ ಬಗ್ಗೆ ಯಾವುದೇ ಚರ್ಚೆಗೆ ನಾನು ಸಿದ್ದ ಎಂದು ಇತ್ತೀಚೆಗೆ ಪೇಜಾವರ ಶ್ರೀಗಳು ನೀಡಿದ್ದ ಹೇಳಿಕೆಯೂ ಭಾರೀ ಚರ್ಚೆಗೊಳಗಾಗಿತ್ತು.ಪರ್ಯಾಯ ಪೀಠದಲ್ಲಿರುವ ಶ್ರೀಗಳು ಕೃಷ್ಣಮಠದ ರಥಬೀದಿ ಆವರಣವನ್ನು ಬಿಟ್ಟು ಹೊರಗೆ ಹೋಗುವ ಪದ್ದತಿಯಿಲ್ಲ, ಆದರೆ ಪೇಜಾವರ ಶ್ರೀಗಳು ಧರ್ಮ ಸಂಸತ್ತಿನ ಪೂರ್ವಭಾವಿ ಸಭೆ, ಹಿಂದೂ ವೈಭವ ಪ್ರದರ್ಶನ ಮತ್ತು ಶುಕ್ರವಾರದ (ನ 25) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Category

🗞
News

Recommended