ಲೋಕ ಕಲ್ಯಾಣಕ್ಕಾಗಿ ಯಾಗಗಳನ್ನು ಮಾಡುವುದನ್ನು ನಾವೆಲ್ಲ ಕೇಳಿರ್ತೇವೆ. ಕೆಲವರು ನೋಡಿರುತ್ತಾರೆ. ಇನ್ನು ಉದ್ಯೋಗದಲ್ಲಿ ಅಭಿವೃದ್ಧಿ ಹೊಂದಿದರೆ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಮಾಡಿರುವುದು ಉಂಟು.ಆದರೆ, ಇಲ್ಲಿ ಉದ್ಯಮಿ ಓರ್ವ ಬ್ಯುಸಿನೆಸ್ ನಲ್ಲಿ ಅಭಿವೃದ್ಧಿ ಕಂಡಿದಕ್ಕೆ ದೇಶದಲ್ಲಿ ನಾಲ್ಕನೇ ಅತೀ ದೊಡ್ಡ ಯಾಗವನ್ನು ಮಾಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಶಕ್ತಿ ದೇವತೆ ನೆಲೆಸಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದಲ್ಲಿ ಫಲ ಸಿಗೋದು ಖಂಡಿತಾ ಅಂತ ನಂಬಿಕೆ. ಇದರ ಅನುಭವ ಕೊಯಮುತ್ತೂರಿನ ಓರ್ವ ಉದ್ಯಮಿಗಾಗಿದೆ. ಹೌದು..ಕೊಯಮುತ್ತೂರಿನ ಎಸ್ ಪೆರಿಯಸ್ವಾಮಿ ಎಂಬ ಉದ್ಯಮಿ ಮಸ್ಕತ್ ನಲ್ಲಿರುವ ತನ್ನ ಜವಾಬಿ ಪವರ್ ಟೆಕ್ ಇಂಜಿನಯರಿಂಗ್ ಎಲ್ ಎಲ್ ಸಿ ಎಂಬ ಕಂಪನಿ ಲಾಭಗಳಿಸುವ ಸಂಕಲ್ಪ ಮಾಡಿದ್ದರು. ಇವರ ಸಂಕಲ್ಪದಂತೆ ಒಂದೇ ವರ್ಷದಲ್ಲಿ ಎಲ್ ಎಲ್ ಸಿ ಕಂಪನಿ ಭಾರಿ ಲಾಭ ಗಳಿಸಿದೆ.ಈ ಹಿನ್ನಲೆಯಲ್ಲಿ ಸುಮಾರು 10 ಕೋಟಿ ರು. ವೆಚ್ಚದಲ್ಲಿ ಐದು ದಿನಗಳ ಕಾಲ ಆಯುತ ಚಂಡಿ ಮಹಾಯಾಗ ಮಾಡಿಸಿದ್ದಾರೆ. ಈ ಯಾಗ ಕೊಲ್ಲೂರಿನಲ್ಲಿ ಮೊದಲು ಹಾಗು ದೇಶದಲ್ಲಿ ನಾಲ್ಕನೇ ಅತೀ ದೊಡ್ಡ ಯಾಗವಾಗಿದೆ.10 ಸಾವಿರ ಪಾರಾಯಣ 1 ಸಾವಿರ ಯಾಗವನ್ನು 10 ಕುಂಡದಲ್ಲಿ ಐದು ದಿನಗಳ ಕಾಲ ನಡೆಯುತ್ತಿದೆ. ಸಕಲ ಕಾರ್ಯ ಸಿದ್ದಿಗಾಗಿ ಈ ಯಾಗ ನಡೆಸಲಾಗುತ್ತೆ. ಈ ಯಾಗವನ್ನು 1,350 ಪುರೋಹಿತರು 2 ಸಾವಿರ ವೈಧಿಕರು ತಮಿಳುನಾಡಿನಿಂದಲೇ ಬಂದು ಯಾಗವನ್ನು ಮಾಡಿರುವುದು ವಿಶೇಷ.
A business men of Tamilnadu offers very expensive Ayutha Chandi Maha yagam. it cost Rs 10 crores. Yagam is offers at Kollur Mookambika temple by calling 1350 Purohits from Tamilnadu for his huge business success. This yaga is said to be India's biggest Yaga so far.

Category
🗞
News