ವಿದೇಶದಲ್ಲೂ ಕನ್ನಡದ ಬೊಂಬೆಗಳ ಸೊಬಗು ತೋರಿದ ಅನುಪಮಾ ಹೊಸಕೆರೆ | Oneindia Kannada

  • 7 years ago
ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿ ದಿನನಿತ್ಯ ಓಡಾಡುವವರು ಈ ವಿಭಿನ್ನ ಬಸ್ ನಿಲ್ದಾಣವನ್ನು ಹಲವು ಬಾರಿ ಕಂಡಿರಬಹುದು. ಬೆಂಗಳೂರಿನಲ್ಲಿರುವ ಬಹುಪಾಲು ಬಸ್ ನಿಲ್ದಾಣಗಳೆಲ್ಲ ಸರ್ಕಾರ, ಬಿಬಿಎಂಪಿ, ಸಿನೆಮಾ ಜಾಹೀರಾತುಗಳಿಂದ ತುಂಬಿ ತುಳುಕುವಾಗ ಕರ್ನಾಟಕದ ಸಾಂಪ್ರದಾಯಿಕ ಬೊಂಬೆಗಳನ್ನು ಒಪ್ಪವಾಗಿ ಜೋಡಿಸಿಟ್ಟ ಈ ಬಸ್ ನಿಲ್ದಾಣ ಅಚ್ಚರಿ ಮೂಡಿಸಿದರೆ ತಪ್ಪೇನಿಲ್ಲ! ಆ ಬಸ್ ನಿಲ್ದಾಣದ ಹಿಂದಿರುವ ಉದ್ದೇಶದ ಜಾಡುಹಿಡಿದು ಹೊರಟಾಗ ಸಿಕ್ಕಿದ್ದು, ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಹೊರಟ ಮಹಿಳೆಯೊಬ್ಬರ ಸಾಧನೆಯ ಕಥೆ.. ಸಿಗಲಿದ್ದ ಉನ್ನತ ಹುದ್ದೆಗಳನ್ನೆಲ್ಲ ತೊರೆದು ಬೊಂಬೆಗಳ ಕಾಲ್ಪನಿಕ ಬದುಕಲ್ಲೇ ತಮ್ಮ ನೈಜ ಬದುಕನ್ನು ಕಂಡುಕೊಂಡ ಅನುಪಮಾ ಹೊಸಕೆರೆಯವರ ಯಶೋಗಾಥೆ ಇದು.ಬೆಂಗಳೂರಿನ ಬಸವನಗುಡಿಯಲ್ಲಿ ಹುಟ್ಟಿ ಬೆಳೆದ ಅನುಪಮಾ ಹೊಸಕೆರೆ ತಮ್ಮ ಪತಿ ವಿದ್ಯಾಶಂಕರ್ ಹೊಸಕೆರೆ ಅವರೊಟ್ಟಿಗೆ ಸೇರಿ 1995 ರಲ್ಲಿ ಆರಂಭಿಸಿದ 'ಧಾತು' ಎಂಬ ಸರ್ಕಾರೇತರ ಸಂಸ್ಥೆ (ಎನ್ ಜಿಒ) ಕನ್ನಡ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿದೆ. ಕರ್ನಾಟಕದ ಸಾಂಪ್ರದಾಯಿಕ ಬೊಂಬೆಗಳ ಕುರಿತು ಅಧ್ಯಯನ ಮಾಡಿ ಗತಕಾಲದ ವೈಭವವನ್ನು ಮತ್ತೊಮ್ಮೆ ನಮ್ಮ ಕಣ್ಮುಂದೆ ತರುವ ಪ್ರಯತ್ನವನ್ನ ಅನುಪಮಾ ಹೊಸಕೆರೆಯವರು ಮಾಡುತ್ತಿದ್ದಾರೆ..

Dhaatu is a non profit organisation in Bhanashakari Bengaluru. The prime aim of the organisation is to give rebirth to Karnataka's traditional puppet culture. Anupama Hosakere, founder of the organisation is our woman achiever of the week. Here is her interview.

Category

🗞
News

Recommended