• 7 years ago
Bigg Boss Kannada 5: Week 4: Sameer Acharya did not insult Brahmin Culture says his wife Shravani.

ಬ್ರಾಹ್ಮಣ ಸಂಪ್ರದಾಯವನ್ನು ಸಮೀರಾಚಾರ್ಯ ಅವಮಾನ ಮಾಡಿಲ್ಲ.! ಅನ್ನುವವರ ಮಾತಿಗೆ ಕಿವಿಗೊಡುವುದಿಲ್ಲ. ಬ್ರಾಹ್ಮಣ ಸಂಪ್ರದಾಯಗಳನ್ನು ನಮ್ಮವರು ಗಾಳಿಗೆ ತೂರಿಲ್ಲ. ಅವರ ಧರ್ಮ ಪಾಲನೆಯಲ್ಲಿ ಎಲ್ಲಿಯೂ ಅಡಚಣೆಯಾಗಿಲ್ಲ. ಮನಬಂದಂತೆ ಮಾತನಾಡುವವರೇ ಎಚ್ಚರವಿರಿ. ಇದಕ್ಕೆ ಮುಂದೊಂದು ದಿನ ತಕ್ಕ ಉತ್ತರ ಕೊಡಲಿದ್ದೇವೆ.... ಹೀಗೆಂದು ಉತ್ತರಿಸಿದವರು 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿ ಸಮೀರಾಚಾರ್ಯ ರವರ ಪತ್ನಿ ಶ್ರಾವಣಿ. ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಧರ್ಮ ಪಾಲನೆ, ಸಂಸ್ಕಾರದ ಕುರಿತಾಗಿಯೇ ಹೆಸರು ಮಾಡಿರುವ ಸಮೀರಾಚಾರ್ಯ ರವರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಮಾತುಗಳು ಕೇಳಿಬರುತ್ತಿದೆ. ''ಅವರು ಗಾಯಿತ್ರಿ ಮಂತ್ರಕ್ಕೆ ಅವಮಾನ ಮಾಡಿದ್ದಾರೆ. ಮೊಟ್ಟೆ ಒಡೆದುಕೊಂಡು ಬ್ರಾಹ್ಮಣತ್ವಕ್ಕೆ ಧಕ್ಕೆ ತಂದಿದ್ದಾರೆ. ಸುಧಾ ಪಂಡಿತರಾಗಿ ಧರ್ಮ ಪಾಲನೆ ಮಾಡುತ್ತಿಲ್ಲ'' ಎಂಬ ಅನೇಕ ಮಾತುಗಳು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಈ ಕುರಿತಾಗಿ ವಿರೋಧಗಳು ಕೂಡ ವ್ಯಕ್ತವಾಗುತ್ತಿದೆ. ಈ ಕುರಿತಾಗಿ ನಿಮ್ಮ ಒನ್ ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡಕ್ಕೆ ಸಮೀರಾಚಾರ್ಯರವರ ಕುಟುಂಬವನ್ನು ಸಂಪರ್ಕಿಸಿದಾಗ ಅವರಿಂದ ಬಂದ ಉತ್ತರ ಹೀಗಿದೆ..

Category

🗞
News

Recommended