• 8 years ago
ಸತ್ಯಜಿತ್​​ ಸ್ಯಾಂಡಲ್​ವುಡ್​​ನ ಬಹುದೊಡ್ಡ ಕಲಾವಿದ. ಹತ್ತಾರು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿ ಉತ್ತರ ಕರ್ನಾಟಕದ ಕೀರ್ತಿ ಪತಾಕಿ ಹಾರಿಸಿದವರು. ಓದಿದ್ದು ಹತ್ತನೇ ಕ್ಲಾಸ್​, ಆದರೂ ಅವರ ಪ್ರತಿಭೆ ಮಾತ್ರ ಅನನ್ಯ ಅಪ್ರತಿಮ. ಒಂದು ಕಾಲದಲ್ಲಿ ಬಹುಬೇಡಿಕೆಯುಳ್ಳ ನಟನಾಗಿದ್ರು. ಲಕ್ಷ ಲಕ್ಷ ಸಂಬಳ ಪಡೀತಾಯಿದ್ರು. ಆದ್ರೆ, ಇಂಥ ಕಲಾವಿದ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಅಲೆದಾಡುವ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ನಟ ಸತ್ಯಜೀತ್​ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಸಿನಿಮಾ ಇಂಡಸ್ಟ್ರೀಯ ಬಹುದೊಡ್ಡ ಕಲಾವಿದ. ಮೇರು ಖಳನಟರ ಸಾಲಿನಲ್ಲಿ ಇವರ ಹೆಸರೂ ಸಹ ಕೇಳಿಬರುತ್ತೆ. ಇಂಥ ನಟ ಈಗ ಹಾಸಿಗೆ ಹಿಡಿದಿದ್ದಾರೆ. ಚಿಕಿತ್ಸೆಗಾಗಿ ಊರೂರು ಅಲೆದಾಡುತ್ತಿದ್ದಾರೆ. ಗ್ಯಾಂಗ್ರಿನ್ ನಿಂದ ಎಡಗಾಲನ್ನ ಕಳೆದುಕೊಂಡ ಸತ್ಯಜೀತ್,​​ ಈಗ ಕಾಲಿಲ್ಲದ ಅಂಗವಿಕಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ ಆದ್ರೆ ಇದೇ ಸತ್ಯಜೀತ್​ ಇವತ್ತು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಬೀಡುಬಿಟ್ಟಿದ್ದರು.
Bagalkot : Senior character actor Satyajit gets artificial leg. His left leg treated with artificial leg treatment. Due to severe sugar complaint his left leg has been removed to control further grievous injury to his life.

Category

🗞
News

Recommended