ಮನೆಯಿಂದ ಇಲಿ, ಜಿರಳೆ, ಜೇಡ ಹಾಗು ಸೊಳ್ಳೆಗಳನ್ನ ಹೋಗಲಾಡಿಸಲು ಸರ ಮನೆಮದ್ದುಗಳು | Oneindia Kannada

  • 6 years ago
Tricks To Get Rid Of Mice And Spider Mice and spider are the creatures that make the house dirtier and also result in spreading of a number of disease-causing germs in and around the house. Assam tea, Nilgiri tea or peppermint tea are most suited to get rid of mice and spider. Other things that can help to get rid of them are peanut butter, mint toothpaste, bay leaves, etc.


ನಗರ ಮತ್ತು ಪಟ್ಟಣಗಳಲ್ಲಿ ಮನೆಗಳಲ್ಲಿ ವಾಸಿಸುವ ಜನರಿಗಿಂತ ಇಲಿ, ಜಿರಳೆ, ಸೊಳ್ಳೆ ಮತ್ತು ಜೇಡನ ಉಪಟಳವೇ ಹೆಚ್ಚು. ಒಂದಕ್ಕೊಂದು ಅಂಟಿಕೊಂಡಿರುವಂತಹ ಮನೆಗಳು, ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು, ತ್ಯಾಜ್ಯ ತಿಪ್ಪೆಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು, ಸ್ವಚ್ಛತೆಯ ಕೊರತೆ ಹೀಗೆ ಮೊದಲಾದ ಕಾರಣಗಳಿಂದ ಇಲಿ, ಹೆಗ್ಗಣ, ಜಿರಳೆ ಮನೆಯ ಒಳಗೆ ಮನೆ ಮಾಡಿಕೊಂಡು ಮನೆಯವರಿಗೆ ಕಾಟ ನೀಡುತ್ತಿರುತ್ತವೆ. ಇವುಗಳನ್ನು ಹೊಡೆದೋಡಿಸಲು ಒಮ್ಮೊಮ್ಮೆ ಹರಸಾಹಸ ಪಡಬೇಕಾಗುತ್ತದೆ. ಆದರೂ ಇವುಗಳು ಆಗಾಗ್ಗೆ ಮನೆಗೆ ಬಂದು ಕಾಟ ಕೊಡುತ್ತಲೇ ಇರುತ್ತವೆ. ಇವುಗಳಿಗೆ ಪ್ರತೀ ದಿನ ಆಹಾರ ದೊರಕುತ್ತಿದ್ದಲ್ಲಿ ಇವುಗಳನ್ನು ಮನೆಯಿಂದ ಓಡಿಸುವುದು ಕೊಂಚ ಪ್ರಯಾಸದ ಕೆಲಸವೇ ಸರಿ. ಅದಕ್ಕೆಂದೇ ಇಂದಿನ ವಿಡಿಯೋದಲ್ಲಿ ಇವುಗಳನ್ನು ಮನೆಗೆ ಬರದಂತೆ ತಡೆಯಲು ನೀವು ಕೈಗೊಳ್ಳಬೇಕಾದ ಕೆಲವೊಂದು ಸುಲಭ ವಿಧಾನಗಳನ್ನು ತಿಳಿಸುತ್ತಿದ್ದೇವೆ.

Category

🗞
News

Recommended