• 7 years ago
Rahul Gandhi has given 3 suggestions to the Union government after GST reduction by GST Council Meet. Rahul has suggested Narendra Modi and Arun Jaitley to correct the fundamental flaw in GST architecture to give India a Genuine Simple Tax.


ಜಿಎಸ್ಟಿ : ರಾಹುಲ್ ಮೂರು ಅತ್ಯಮೂಲ್ಯ ಉಪದೇಶಗಳು. "ನೀವು ಸರಕಾರದ ಮೇಲೆ ಈ ರೀತಿ ಒತ್ತಡ ಹೇರಿದ್ದರಿಂದಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಿಎಸ್ಟಿ ದರಗಳನ್ನು ಇಳಿಸಿದೆ. ಇಲ್ಲದಿದ್ದರೆ ಈ ಸರಕಾರ ನಮ್ಮನ್ನು ಮುಗಿಸಿ ಹಾಕುತ್ತಿದೆ!" ಎಂದು ಟ್ವಿಟ್ಟಿಗರೊಬ್ಬರು ರಾಹುಲ್ ಗಾಂಧಿ ಅವರ ಬೆನ್ನು ತಟ್ಟಿದ್ದಾರೆ. ನವೆಂಬರ್ 10ನೇ ತಾರೀಖಿನಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಸಿದ ನಂತರ ಶೇ.28ರಷ್ಟು ಜಿಎಸ್ಟಿ ಹೊಂದಿದ್ದ 177 ವಸ್ತುಗಳ ತೆರಿಗೆಯನ್ನು ಇಳಿಸಿ ಕೇಂದ್ರ ಸರಕಾರ ನಿರ್ಣಯ ತೆಗೆದುಕೊಂಡ ನಂತರ ದೇಶದೆಲ್ಲೆಡೆ ಹರ್ಷೋದ್ಘಾರ ಮೂಡಿಬಂದಿದೆ.ಇದಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದ ರಾಹುಲ್ ಗಾಂಧಿಯವರು, "ನಾವು ಗಬ್ಬರ್ ಸಿಂಗ್ ಟ್ಯಾಕ್ಸ್ ಹೊರಿಸಲು ಬಿಜೆಪಿಗೆ ಬಿಡುವುದಿಲ್ಲ. ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬೆನ್ನೆಲುಬು ಮುರಿಯಲು ಮತ್ತು ಸಹಸ್ರಾರು ಉದ್ಯೋಗವನ್ನು ಕಸಿದುಕೊಳ್ಳಲು ನಾವು ಅವರಿಗೆ ಅವಕಾಶ ನೀಡುವುದಿಲ್ಲ" ಎಂದು ರಾಹುಲ್ ಅಬ್ಬರಿಸಿದ್ದಾರೆ.ಜೊತೆಗೆ ಕಾಂಗ್ರೆಸ್ ಉಪಾಧ್ಯಕ್ಷ ಅವರು ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರಕಾರಕ್ಕೆ ಮೂರು ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಇದನ್ನು ಒಪ್ಪುವುದು ಬಿಡುವುದು ಕೇಂದ್ರ ಸರಕಾರಕ್ಕೆ ಬಿಟ್ಟಿದ್ದು.

Category

🗞
News

Recommended