Skip to playerSkip to main contentSkip to footer
  • 5/28/2020
ತುಂಬಾ ಜನ ಪೋಷಕರಿಗೆ ಮಕ್ಕಳು ಸರಿಯಾಗಿ ಆಹಾರ ಸೇವಿಸುತ್ತಿಲ್ಲ ಎನ್ನುವುದೇ ಚಿಂತೆಯಾಗಿರುತ್ತೆ. ಬೆಳೆಯುವ ಪ್ರಾಯದಲ್ಲಿ ಪೋಷಕಾಂಶದ ಕೊರತೆ ಉಂಟಾದರೆ ಅದು ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಬೆಳವಣಿಗೆಗೆ ಪೋಷಕಾಂಶವಿರುವ ಆಹಾರ ಸೇವನೆ ಅವಶ್ಯಕ. ಇನ್ನು ಮಕ್ಕಳು ಎತ್ತರ ಬೆಳೆಯಬೇಕು, ಅವರ ವಯಸ್ಸಿನ ಇತರ ಮಕ್ಕಳಂತೆಯೇ ಇವರ ಎತ್ತರ ಇರಬೇಕು ಎಂದು ಪೋಷಕರು ಹಾಗೂ ಮಕ್ಕಳು ಬಯಸುತ್ತಾರೆ. ಮಕ್ಕಳ ಬೆಳವಣಿಗೆ ಸರಿಯಾಗಿರಬೇಕೆಂದರೆ ಮೂಳೆಗಳು, ಮೂಳೆ ಸಂಧಿಗಳು ಹಾಗೂ ದೇಹ ಆರೋಗ್ಯವಾಗಿರಬೇಕು. ಇದಕ್ಕೆ ವಿಟಮಿನ್ಸ್ ಇರುವ ಆಹಾರ ಸೇವನೆ ಮಾಡಬೇಕು. ಮಕ್ಕಳ ಬೆಳವಣಿಗೆಯಲ್ಲಿ ವಿಟಮಿನ್ ಡಿ, ಮೆಗ್ನಿಷ್ಯಿಯಂ, ರಂಜಕ ಪ್ರಮುಖವಾಗಿರುತ್ತದೆ. ಅಂಥ ಆಹಾರವನ್ನು ನಿಮ್ಮ ಮಕ್ಕಳ ಆಹಾರಕ್ರಮದಲ್ಲಿ ಸೇರಿಸಿದರೆ ಅದರಲ್ಲಿರುವ ವಿಟಮಿನ್ಸ್ ಹಾಗೂ ಪೋಷಕಾಂಶ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇಲ್ಲಿ ಮಕ್ಕಳ ಬೆಳವಣಿಗೆಗೆ ಅವಶ್ಯಕವಾದ ಟಾಪ್‌ 10 ವಿಟಮಿನ್ಸ್ ಪಟ್ಟಿ ನೀಡಿದ್ದೇವೆ ನೋಡಿ:

Recommended