• 6 years ago
A Multi-storey building collapse in Bengaluru's Kasavanahalli. at least 25 labors struck under remnant. fire fighters began there rescue operation.


ನಗರದ ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಕನಿಷ್ಟ 20 ಜನ ಕಾರ್ಮಿಕರು ಕಟ್ಟಡದ ಅವಶೇಷದ ಅಡಿ ಸಿಲುಕಿದ್ದಾರೆ. ಕಟ್ಟಡದ ಒಳಗೆ ಸುಮಾರು 25 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದ್ದು, 6 ಜನ ಕಾರ್ಮಿಕರನ್ನು ಈಗಾಗಲೇ ಸ್ಥಳೀಯರು ರಕ್ಷಿಸಿದ್ದಾರೆ. ಇನ್ನೂ ಸಾಕಷ್ಟು ಜನ ಕಾರ್ಮಿಕರು ಅವಶೇಷದ ಅಡಿ ಸಿಲುಕಿದ್ದಾರೆ, ಸಾವು ನೋವು ಆಗಿರ ಬಹುದು ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಧಾವಿಸಿದ್ದು, ಸ್ಥಳೀಯರ ಸಹಾಯದೊಂದಿಗೆ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Category

🗞
News

Recommended