ಮಹಾದಾಯಿ ವಿವಾದದಲ್ಲಿ ಮಾತುಕತೆ ಸಾಧ್ಯವಿಲ್ಲ ಎಂದ ಮನೋಹರ್ ಪರಿಕ್ಕರ್ | Oneindia Kannada

  • 7 years ago
ಮಹಾದಾಯಿ ವಿವಾದದಲ್ಲಿ ಮಾತುಕತೆಗೆ ಸಿದ್ಧ ಎಂಬ ಸಂದೇಶ ನೀಡಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಯು ಟರ್ನ್ ಹೊಡೆದಿದ್ದಾರೆ. ಕರ್ನಾಟಕ ಜತೆಗಿನ ನೀರಾವರಿ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಹಾದಾಯಿ ಜಲವಿವಾದ ನ್ಯಾಯಮಂಡಳಿಯಲ್ಲೇ ಹೋರಾಟ ಮಾಡುವುದಾಗಿ ಅವರು ಹೇಳಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದು ಹೊಸ ನಿರೀಕ್ಷೆ ಮೂಡಿಸಿದ್ದ ಪರಿಕ್ಕರ್ ಇದೀಗ ಮಾಧ್ಯಮಗಳನ್ನು ದೂಷಿಸಿದ್ದಾರೆ. ಸಮಸ್ಯೆಯೇ ಇಲ್ಲದ ಜಾಗದದಲ್ಲಿ ಸಮಸ್ಯೆ ಸೃಷ್ಟಿಸಿದ್ದೀರಿ ಎಂದು ಅವರು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ. ಜತೆಗೆ ಮಾತುಕತೆಗೆ ಸಿದ್ಧವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜತೆಗನ ಸಭೆಯ ನಂತರ ಬುಧವಾರ ಪ್ರತಿಕ್ರಿಯೆ ನೀಡಿರುವ ಮನೋಹರ್ ಪರಿಕ್ಕರ್, "ಸುದ್ದಿಗಾಗಿ ನೀವು (ಮಾಧ್ಯಮ) ಮಹಾದಾಯಿ ಸಮಸ್ಯೆಯನ್ನು ಸೃಷ್ಟಿಸಿದ್ದೀರಿ. ಮಹಾದಾಯಿ ನೀರು ಹಂಚಿಕೆ ಹೋರಾಟ ನ್ಯಾಯಮಂಡಳಿ ಮುಂದಿದೆ ಮತ್ತು ನಾವು ಅಲ್ಲೇ ಹೋರಾಟ ಮಾಡುತ್ತೇವೆ," ಎಂದು ಸ್ಪಷ್ಟಪಡಿಸಿದ್ದಾರೆ.


Goa Chief minister Manohar Parrikar has suddenly trying to take a U turn after his meeting with Prime Minister Modi about Mahadayi issue

Recommended