• 7 years ago
Rocking Star Yash Birthday Special, KGF Movie Teaser was released but it didn't trend on Social Media but Actor Kiccha Sudeep's 'Kotigobba 3' movie is no 1 trending topic in twitter. 'Kotigobba 3' movie will producing by Soorappa Babu.

ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಈ ವಿಶೇಷವಾಗಿ 'ಕೆ.ಜಿ.ಎಫ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಯಶ್ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಪ್ರೇಮಿಗಳು ಈ ಬಹುನಿರೀಕ್ಷಿತ ಸಿನಿಮಾದ ಟೀಸರ್ ನೋಡಿ ಖುಷಿ ಆಗಿದ್ದಾರೆ. ಕನ್ನಡ ಸಿನಿಮಾದ ಹಾಡುಗಳು, ಟೀಸರ್ ಗಳು ಹಾಗೂ ಟ್ರೇಲರ್ ಗಳು ಯೂಟ್ಯೂಬ್ ನಲ್ಲಿ ಇಂದಿನ ದಿನಗಳಲ್ಲಿ ದೊಡ್ಡ ಜನಪ್ರಿಯತೆ ಗಳಿಸುತ್ತಿದೆ. ಸಾಧಾರಣ ಮಟ್ಟದ ನಟರ ಚಿತ್ರಗಳು ಕೂಡ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗುವುದು ಕಮಾನ್ ಆಗಿಬಿಟ್ಟಿದೆ. ಆದರೆ ಅದೆಕೋ ಯಶ್ ಅವರ 'ಕೆ.ಜಿ.ಎಫ್' ಮಾತ್ರ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಲಿಲ್ಲ. ಜೊತೆಗೆ ಟ್ವಿಟ್ಟರ್ ನಲ್ಲಿಯೂ 'ಕೆ.ಜಿ.ಎಫ್' ಟ್ರೆಂಡಿಂಗ್ ನಲ್ಲಿ ಇಲ್ಲ. ಆದರೆ ಆಶ್ಚರ್ಯ ಎಂಬಂತೆ ಇದೇ ದಿನ ಟ್ವಿಟ್ಟರ್ ನಲ್ಲಿ ಸುದೀಪ್ ಅವರ 'ಕೋಟಿಗೊಬ್ಬ 3' ಸಿನಿಮಾ ಇದ್ದಕ್ಕಿದಂತೆ ಟ್ರೆಂಡಿಂಗ್ ಆಗಿದೆ.

Category

🗞
News

Recommended