ರವಿ ಬೆಳಗೆರೆ ಬಂಧನ | ಹೆಚ್ಚುವರಿ ಆಯುಕ್ತರು ಸತೀಶ್ ಕುಮಾರ್ ಕೇಸ್ ಬಗ್ಗೆ ಹೇಳೋದು ಹೀಗೆ | Oneindia Kannada

  • 7 years ago
Kannada tabloid 'Hai Bangalore' Editor Ravi Belagere arrested in Bengaluru by CCB sleuths for allegedly giving Supari to Sharp Shooters to Kill journalist Sunil Heggaravalli, ex-employee of Hai Bangalore. Now he accepts his mistake in front of Police & agrees that he has given Supari. Additional Commissioner of Police, City Crime Branch Mr. Satish Kumar speaks about the case & gives few information. Watch Video.

ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳೆಗೆರೆಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಪದ್ಮನಾಭನಗರದ ಕಚೇರಿಯಲ್ಲಿ ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಪತ್ರಕರ್ತರೊಬ್ಬರನ್ನು ಕೊಲ್ಲಲುಶಾರ್ಪ್ ಶೂಟರ್ಸ್ ಗೆ ಸುಪಾರಿ ಕೊಟ್ಟಿದ್ದ ಆರೋಪದ ಮೇಲೆ ರವಿಬೆಳಗೆರೆಯನ್ನು ಬಂಧಿಸಲಾಗಿದೆ. ಶಾರ್ಪ್ ಶೂಟರ್ ಶಶಿಧರ್ ಮುಂಡೇವಾಡಗಿ ಹಾಗೂ ಸಹಚರರು ವಿಚಾರಣೆ ವೇಳೆ ಈ ವಿಷಯ ಬಾಯ್ಬಿಟ್ಟಿದ್ದಾನೆ. ಹಾಯ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲಲು ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರು ಎಂದು ಶಾರ್ಪ್ ಶೂಟರ್ಸ್ ಶಶಿಧರ್ ಹೇಳಿದ್ದ ಎಂದು ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ.ಸುನೀಲ್ ಹೆಗ್ಗರವಳ್ಳಿ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸುಮಾರು 17 ವರ್ಷಗಳ ಕಾಲ ಕ್ರೈಂ ವರದಿಗಾರರಾಗಿ ಕೆಲಸ ಮಾಡಿದ್ದರು. ಮೂರು ವರ್ಷಗಳ ಹಿಂದೆ ಹಾಯ್ ಬೆಂಗಳೂರು ಪತ್ರಿಕೆ ತೊರೆದು ಬೇರೆ ಚಾನೆಲ್ ಆರಂಭಿಸುವ ಉತ್ಸಾಹದಲ್ಲಿದ್ದರು.